ಎಲ್‌ಐಸಿಯ 70ನೇ ವಾರ್ಷಿಕ ವಾರಾಚರಣೆಗೆ ಕಾಸರಗೋಡು ಬ್ರಾಂಚ್‌ನಲ್ಲಿ ಚಾಲನೆ

ಕಾಸರಗೋಡು: ಲೈಫ್ ಇನ್ಶೂರೆನ್ಸ್ ಕಾರ್ಪೊರೇಶನ್ ಆಫ್ ಇಂಡಿಯದ ೭೦ನೇ ವಾರ್ಷಿಕಾಚರಣೆಯಂಗವಾಗಿ  ಕಾಸರಗೋಡು ಬ್ರಾಂಚ್‌ನಲ್ಲಿ ಆಯೋಜಿಸುವ ಒಂದು ವಾರ ಕಾಲ ನಡೆಯುವ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಯಿತು. ಕಾಸರಗೋಡು ಎಲ್‌ಐಸಿ ಬ್ರಾಂಚ್‌ನಲ್ಲಿ ನಡೆದ ಕಾರ್ಯಕ್ರಮವನ್ನು ಡೆವಲಪ್‌ಮೆಂಟ್ ಪ್ಯಾಕೇಜ್ ಸ್ಪೆಷಲ್ ಆಫೀಸರ್ ಚಂದ್ರನ್ ವಿ. ಉದ್ಘಾಟಿಸಿದರು. ಸೀನಿಯರ್ ಬ್ರಾಂಚ್ ಮೆನೇಜರ್ ಎಂ.ವಿ. ಶ್ರೀಜಿತ್ ಅಧ್ಯಕ್ಷತೆ ವಹಿಸಿದರು. ವಿಮೆಯ ಪ್ರಾಮುಖ್ಯತೆ ಬಗ್ಗೆ, ಸಾಮಾಜಿಕ ಪ್ರಸ್ತುತತೆಯ ಬಗ್ಗೆ ಹೊಸ ತಲೆಮಾರಿಗೂ ಮಾಹಿತಿ ತಲುಪಿಸುವುದಕ್ಕೆ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಸಂಬಂಧಪಟ್ಟವರು ತಿಳಿಸಿದ್ದಾರೆ.

ಪ್ರೀತಪ್ರೇಮನ್ ಸ್ವಾಗತಿಸಿದರು. ಮತಿಯರಸು ವಂದಿಸಿದರು. ಡೆವಲಪ್‌ಮೆಂಟ್ ಆಫೀಸರ್‌ಗಳು, ಎಲ್‌ಐಸಿ ನೌಕರರು, ಏಜೆಂಟರ್‌ಗಳು ಶುಭ ಕೋರಿದರು.

You cannot copy contents of this page