ಕುಂಬಳೆ: ಕಾಂಕ್ರೀಟ್ ಮನೆಗೆ ಸಿಡಿಲು ಬಡಿದು ವ್ಯಾಪಕ ನಾಶನಷ್ಟ ಸಂಭವಿಸಿದೆ. ಮನೆಯವರು ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ. ಕುಂಬಳೆ ದೇವಿನ ಗರದ ರಾಜನ್ ಎಂಬವರ ಮನೆಗೆ ನಿನ್ನೆ ಸಂಜೆ ಸಿಡಿಲಿನಾಘಾತವುಂ ಟಾಗಿದೆ. ಮನೆಯ ಸ್ವಿಚ್ ಬೋರ್ಡ್ ಸಹಿತ ವಯರಿಂಗ್ ಉರಿದು ನಾಶಗೊಂ ಡಿದೆ. ಇಲೆಕ್ಟ್ರೋನಿಕ್ ಉಪಕರಣ ಗಳು ಹಾನಿಗೀಡಾಗಿವೆ. ಗೋಡೆ ಯಲ್ಲಿ ಬಿರುಕುಬಿಟ್ಟಿದ್ದು, ಸಿಮೆಂಟಿನ ತುಂಡುಗಳು ಚದುರಲ್ಪಟ್ಟಿವೆ. ಈವೇಳೆ ರಾಜನ್, ಪತ್ನಿ ಸುಲೋಚನ, ಮಕ್ಕಳಾದ ದೀಪಕ್, ದೀಕ್ಷಿತ್ ಮನೆಯೊಳಗಿದ್ದರು. ಭಾರೀ ಶಬ್ದ ಕೇಳಿಬಂದ ಹಿನ್ನೆಲೆಯಲ್ಲಿ ಎಲ್ಲರೂ ಮನೆಯಿಂದ ಹೊರಕ್ಕೆ ಓಡಿದ್ದರು. ನಿರ್ಮಾಣ ಪೂರ್ಣ ಗೊಂಡ ಮನೆಯ ಎರಡಂತಸ್ತಿನ ಕೊಠಡಿಗೆ ಸಿಡಿಲಿನಿಂದ ಹಾನಿಯುಂ ಟಾಗಿದೆ. ಲಕ್ಷಾಂತರ ರೂಪಾಯಿ ಗಳ ನಷ್ಟ ಸಂಭವಿಸಿದೆಯೆಂದು ವಾರ್ಡ್ ಸದಸ್ಯ ತಿಳಿಸಿದ್ದಾರೆ.






