ಉಪ್ಪಳ: ಸಿಡಿಲಿನ ಆಘಾತಕ್ಕೆ ಮನೆ ಬಿರುಕು ಬಿಟ್ಟು ವಯರಿಂಗ್ ಪೂರ್ತಿ ಉರಿದು ಹೋದ ಘಟನೆ ನಡೆದಿದೆ. ಮಂಗಲ್ಪಾಡಿ ಪಂಚಾಯತ್ ವ್ಯಾಪ್ತಿಯ ಬಂದ್ಯೋಡು ಪರಿಶಿಷ್ಟ ಪಂಗಡದವರ ಕೇಂದ್ರ ನಿವಾಸಿ ಕೂಲಿ ಕಾರ್ಮಿಕ ಉಮೇಶ ಎಂಬವರ ಮನೆಗೆ ಶನಿವಾರ ಸಂಜೆ ಸಿಡಿಲು ಬಡಿದಿದೆ. ಈ ವೇಳೆ ಮನೆಯ ಗೋಡೆ ಬಿರುಕು ಬಿಟ್ಟು ವಯರಿಂಗ್ ಪೂರ್ತಿ ಉರಿದು ಹೋಗಿದ್ದು, ವಿದ್ಯುತ್ ಉಪಕರಣಗಳು ಹಾನಿಗೊಂಡಿದೆ.
ಮನೆ ಮಂದಿ ಅಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಮಂಗಲ್ಪಾಡಿ ವಿಲೇಜ್ ಅಧಿಕಾರಿಗಳು, ಪಂಚಾಯತ್ ಸದಸ್ಯರಾದ ಕಿಶೋರ್ ಕುಮಾರ್, ಬಾಬು ಬಂದ್ಯೋಡು ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದಾರೆ.
