ಕುಂಬಳೆ: ಕುಂಬಳೆ ದೇವಿನಗರದಲ್ಲಿ ಡ್ರೈ ಡೇ ದಿನವಾದ ನಿನ್ನೆ ಕಾಸರಗೋಡು ಎಕ್ಸೈಸ್ ಸ್ಪೆಷಲ್ ಸ್ಕ್ವಾಡ್‌ನ ಅಸಿಸ್ಟೆಂಟ್ ಎಕ್ಸೈಸ್ ಇನ್‌ಸ್ಪೆಕ್ಟರ್ ಗ್ರೇಡ್ ಸಿಕೆವಿ ಸುರೇಶ್ ನೇತೃತ್ವದ ಅಬಕಾರಿ ತಂಡ ನಡೆಸಿದ ಕಾರ್ಯಾಚರಣೆಯಲ್ಲಿ ಮನೆಯೊಂದರಲ್ಲಿ ನಿಗದಿತ ಪ್ರಮಾಣಕ್ಕಿಂತಲೂ ಹೆಚ್ಚು ಬಚ್ಚಿಡಲಾದ ಕೇರಳ ಮದ್ಯ ಬಿಯರ್ ಪತ್ತೆಹಚ್ಚಿ ವಶಪಡಿಸಲಾಗಿದೆ. ಇದಕ್ಕೆ ಸಂಬಂಧಿಸಿ ಪವನ್‌ರಾಜ್ ಎಂಬಾತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಆರೋಪಿಯ ಸಂಬಂಧಿಕರೋರ್ವರ ವಾಸವಿಲ್ಲದ ಮನೆಯಲ್ಲಿ ಈ ಮಾಲು ಬಚ್ಚಿಡಲಾಗಿತ್ತು. ಅದರಲ್ಲಿ 65೦ ಎಂಎಲ್‌ನ 84 ಬಾಟಲಿ (54.9 ಲೀಟರ್) ಕೇರಳಮದ್ಯ ಮತ್ತು 500 ಎಂಎಲ್‌ನ 34 ಬಾಟಲಿ (12 ಲೀಟರ್) ಕೇರಳ ಮದ್ಯ ಒಳಗೊಂಡಿತ್ತೆಂದು ನಂತರ ಅದನ್ನು ಕುಂಬಳೆ ಅಬಕಾರಿ ರೇಂಜ್ ಕಚೇರಿಗೆ ಹಸ್ತಾಂರಿಸಲಾಯಿತೆಂದು ಅಬಕಾರಿ ಅಧಿಕಾರಿಗಳು ತಿಳಿಸಿದ್ದಾರೆ. ಈ ಕಾರ್ಯಾಚರಣೆ ನಡೆಸಿದ ತಂಡದಲ್ಲಿ ಸಿವಿಲ್ ಎಕ್ಸೈಸ್ ಆಫೀಸರ್‌ಗಳಾದ ಶಾಲಿನಿ, ಶೈಲೇಶ್ ಕುಮಾರ್,ಸುಧೀಶ್ ಪಾರಮ್ಮಲ್, ವಿಪಿನ್ ಕುಮಾರ್ ಮತ್ತು ನಿದಿನ್ ಎಂಬಿವರು ಒಳಗೊಂಡಿದ್ದರು. ಐಬಿಯ ಗ್ರೇಡ್ ಎಇಐ ಎಂ.ವಿ. ಸುಧೀಂದ್ರನ್‌ರಿಗೆ ಲಭಿಸಿದ ಗುಪ್ತ ಮಾಹಿತಿಯಂತೆ ಅಬಕಾರಿ ತಂಡ ಈ ಕಾರ್ಯಾಚರಣೆ ನಡೆಸಿದೆ.







