ಕಾರಿನಲ್ಲಿ ಸಾಗಿಸುತ್ತಿದ್ದ 25.92 ಲೀಟರ್ ಮದ್ಯ ವಶ: ಆರೋಪಿ ಪರಾರಿ

ಕಾಸರಗೋಡು: ಕೂಡ್ಲು ಸೂರ್ಲಿನಲ್ಲಿ ಕಾಸರಗೋಡು ಎಕ್ಸೈಸ್ ರೇಂಜ್ ಕಚೇರಿಯ ಪ್ರಿವೆಂಟೀವ್ ಆಫೀಸರ್ ಕೆ.ವಿ. ರಂಜನ್ ನೇತೃತ್ವದ ತಂಡ ನಿನ್ನೆ ನಡೆಸಿದ ಕಾರ್ಯಾಚರಣೆ ಯಲ್ಲಿ ಕರ್ನಾಟಕ ರಾಜ್ಯ ನೋಂದಾ ಯಿತ ಆಲ್ಟೋ ಕಾರಿನಲ್ಲಿ ಸಾಗಿಸು ತ್ತಿದ್ದ 25.92ಲೀಟರ್ ಕರ್ನಾಟಕ ಮದ್ಯ ಪತ್ತೆಹಚ್ಚಿ ವಶಪಡಿಸಿಕೊಂಡಿದೆ. ಈ ವೇಳೆ  ಕಾರಿನಲ್ಲಿದ್ದ ವ್ಯಕ್ತಿ ಪರಾರಿಯಾಗಿರುವುದಾಗಿಯೂ ಈ ಬಗ್ಗೆ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಲಾಗಿದೆ ಎಂದು ಅಬಕಾರಿ ಅಧಿಕಾರಿಗಳು  ತಿಳಿಸಿದ್ದಾರೆ.

ಓಣಂ ಸ್ಪೆಷಲ್ ಡ್ರೈವ್ ಕಾರ್ಯಾಚರಣೆಯಂತೆ ಇ.ಇ ಆಂಡ್ ಎಎನ್‌ಎಸ್‌ಎಸ್ ಕಚೇರಿ ಅಸಿಸ್ಟೆಂಟ್ ಎಕ್ಸೈಸ್ ಇನ್‌ಸ್ಪೆಕ್ಟರ್ (ಗ್ರೇಡ್) ಸಿ.ಕೆ.ವಿ ಸುರೇಶ್‌ರಿಗೆ ಲಭಿಸಿದ ಗುಪ್ತ ಮಾಹಿತಿಯಂತೆ ಈ ಕಾರ್ಯಾಚರಣೆ ನಡೆಸಲಾಗಿದೆ. ಈ ದಾಳಿ ನಡೆಸಿದ ಅಬಕಾರಿ ತಂಡದಲ್ಲಿ ಸಿವಿಲ್ ಎಕ್ಸೈಸ್ ಆಫೀಸರ್‌ಗಳಾದ ಪ್ರಶಾಂತ್ ಕುಮಾರ್  ಎ.ವಿ, ಅಮಲ್‌ಜಿತ್ ಸಿ.ಎಂ, ಶಂಸುದ್ದೀನ್ ಎಂ, ಅಶ್ವತಿ ವಿ.ವಿ ಮತ್ತು ಚಾಲಕ ಜೋಸೆಫ್ ಒಳಗೊಂಡಿದ್ದರು.

RELATED NEWS

You cannot copy contents of this page