ಮದ್ಯ ವಶ: ಮಹಿಳೆ ವಿರುದ್ಧ ಕೇಸು

ಕಾಸರಗೋಡು: 2.16 ಲೀಟರ್ (180 ಎಂಎಲ್‌ನ 12 ಪ್ಯಾಕೆಟ್) ಕರ್ನಾಟಕ ಮದ್ಯ ಕೈವಶವಿರಿಸಿದ ಆರೋಪದಂತೆ ಮಹಿಳೆಯರ ವಿರುದ್ಧ ಅಬಕಾರಿ ತಂಡ ಪ್ರಕರಣ ದಾಖಲಿಸಿ ಮಾಲು ವಶಪಡಿಸಿಕೊಂಡಿದೆ. ಉಳಿಯತ್ತಡ್ಕದ ಮಿನಿ ಎಂಬಾಕೆಯ ವಿರುದ್ಧ ಈ ಪ್ರಕರಣ ದಾಖಲಿಸಿಕೊಳ್ಳ ಲಾಗಿದೆ. ಉಳಿಯತ್ತಡ್ಕದಲ್ಲಿ ಕಾಸರ ಗೋಡು ಎಕ್ಸೈಸ್ ಸ್ಪೆಷಲ್ ಸ್ಕ್ವಾಡ್‌ನ ಇನ್ಸ್‌ಪೆಕ್ಟರ್ ವಿಷ್ಣುಪ್ರಕಾಶ್‌ರ ನೇತೃತ್ವದ ಅಬಕಾರಿ  ಅಬಕಾರಿ ತಂಡ ಉಳಿಯ ತ್ತಡ್ಕದಲ್ಲಿ ನಿನ್ನೆ ಈ ಕಾರ್ಯಾಚರಣೆ ನಡೆಸಿದೆ. ಈ ಮಹಿಳೆಯ ಹೆಸರಲ್ಲಿ ಇತರ ಅಬಕಾರಿ ಪ್ರಕರಣಗಳೂ ಇವೆ ಎಂದು ಅಬಕಾರಿ ಅಧಿಕಾರಿಗಳು ತಿಳಿಸಿದ್ದಾರೆ. ಗ್ರೇಡ್ ಅಸಿಸ್ಟೆಂಟ್ ಎಕ್ಸೈಸ್ ಇನ್ಸ್‌ಪೆಕ್ಟರ್ ಸಿಕೆವಿ ಸುರೇಶ್, ಪ್ರಿವೆಂಟೀವ್ ಆಫೀಸರ್ (ಗ್ರೇಡ್) ನೌಶಾದ್, ಸಿವಿಲ್ ಎಕ್ಸೈಸ್ ಆಫೀಸರ್ ಗಳಾದ ಶಿಜಿತ್, ಅತುಲ್, ಧನ್ಯಾ ಎಂಬವರು ಈ ಕಾರ್ಯಾಚರಣೆ ನಡೆಸಿದ ತಂಡದಲ್ಲಿ ಒಳಗೊಂಡಿದ್ದರು.

You cannot copy contents of this page