ಸ್ಥಳೀಯಾಡಳಿತ ಸಂಸ್ಥೆ ಚುನಾವಣೆ ಎಸ್‌ಐಗಳಿಗೆ ವರ್ಗಾವಣೆ

ಕಾಸರಗೋಡು: ಸ್ಥಳೀಯಾಡಳಿತ ಸಂಸ್ಥೆಗೆ ನಡೆಯಲಿರುವ ಚುನಾವಣೆಗೆ ಪೂರ್ವಭಾವಿಯಾಗಿ ಜಿಲ್ಲೆಯ ಹಲವು ಪೊಲೀಸ್ ಠಾಣೆಗಳ ಎಸ್‌ಐಗಳನ್ನು   ವರ್ಗಾಯಿಸಲಾಗಿದೆ. ಇದರಂತೆ ಹೊಸದುರ್ಗ ಪೊಲೀಸ್  ಠಾಣೆಯ ಇನ್ಸ್‌ಪೆಕ್ಟರ್ ಪಿ. ಅಜಿತ್ ಕುಮಾರ್ ರನ್ನು ಮಂಜೇಶ್ವರ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ. ಅಂಬಲತ್ತರ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಕೆ.ಪಿ. ಶೈನ್‌ರನ್ನು ವಿದ್ಯಾನಗರಕ್ಕೆ ವರ್ಗಾಯಿಸ ಲಾಗಿದೆ. ಎನ್.ಪಿ. ರಾಘವನ್‌ರನ್ನು ಮೇಲ್ಪರಂಬಕ್ಕೂ, ಚಿತ್ತಾರಿಕಲ್ ಇನ್ಸ್‌ಪೆಕ್ಟರ್ ರಂಜಿತ್ ರವೀಂದ್ರನ್‌ರನ್ನು ಅಂಬಲತ್ತರಕ್ಕೆ ವರ್ಗಾಯಿಸಲಾಗಿದೆ. ವಿದ್ಯಾನಗರ ಪೊಲೀಸ್ ಇನ್ಸ್‌ಪೆಕ್ಟರ್ ವಿಪಿನ್ ವಿ.ಪಿ.ರನ್ನು ಬೇಕಲಕ್ಕೆ ವರ್ಗಾ ಯಿಸಲಾಗಿದೆ. ಮಂಜೇಶ್ವರ ಇನ್ಸ್‌ಪೆಕ್ಟರ್ ಇ. ಅನೂಪ್‌ರನ್ನು ಹೊಸದುರ್ಗಕ್ಕೂ, ಅನಿಲ್ ಕುಮಾರ್‌ರನ್ನು ಬದಿಯಡ್ಕಕ್ಕೆ ಹಾಗೂ ಎಂ.ವಿ. ವಿಷ್ಣುಪ್ರಸಾದ್‌ರನ್ನು ಆದೂರು ಠಾಣೆಗೆ ವರ್ಗಾಯಿಸಲಾಗಿದೆ. ಬೇಕಲ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಎಂ.ವಿ. ಶ್ರೀದಾಸ್‌ರನ್ನು ಚೀಮೇನಿಗೂ, ಕುಂಬಳೆ ಠಾಣೆ ಇನ್ಸ್‌ಪೆಕ್ಟರ್ ಜಿಜೀಶ್‌ರನ್ನು ಕಾಸರಗೋಡು ವಿಜಿಲೆನ್ಸ್ ವಿಭಾಗಕ್ಕೆ ವರ್ಗಾಯಿಸಲಾಗಿದೆ. ಮೇಲ್ಪರಂಬ ಇನ್ಸ್‌ಪೆಕ್ಟರ್ ಎ. ಸಂತೋಷ್ ಕುಮಾರ್‌ರನ್ನು ಚಿತ್ತಾರಿಕಲ್ ಠಾಣೆಗೆ ವರ್ಗಾಯಿಸಲಾಗಿದೆ.

RELATED NEWS

You cannot copy contents of this page