ತಿರುವನಂತಪುರ: ಸ್ಥಳೀಯಾಡಳಿತ ಸಂಸ್ಥೆಗಳಿಗೆ ಸಲ್ಲಿಸಿದ ನಾಮಪತ್ರಗಳ ಸೂಕ್ಷ್ಮ ತಪಾಸಣೆ ಇಂದು ನಡೆಯಲಿದೆ. 14 ಜಿಲ್ಲೆಗಳಲ್ಲಾಗಿ 1,08,580 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರಗಳನ್ನು ಹಿಂತೆಗೆಯಲಿರುವ ಕೊನೆಯ ದಿನಾಂಕ ಈ ತಿಂಗಳ 24 ಆಗಿದೆ. ಸೂಕ್ಷ್ಮ ತಪಾಸಣೆ ಬಳಿಕ ಉಳಿದಿರುವ ನಾಮಪತ್ರಗಳನ್ನು ಹಿಂತೆಗೆದರೆ ಆ ಬಳಿಕ ಉಳಿದಿರುವ ನಾಮಪತ್ರಗಳು ನಿಜವಾದ ಸ್ಪರ್ಧಾ ಳುಗಳ ಸಂಖ್ಯೆಯಾಗಿದೆ. ಸಂಬAಧಪಟ್ಟ ಚುನಾವಣಾಧಿಕಾರಿಗಳು ನಾಮಪತ್ರಗಳ ಸೂಕ್ಷ್ಮ ತಪಾಸಣೆ ನಡೆಸುವರು. ಈ ವೇಳೆ ಅಭ್ಯರ್ಥಿಯ ಜೊತೆಯಲ್ಲಿ ಚುನಾವಣೆ ಏಜೆಂಟ್, ನಿರ್ದೇಶಕರು ಎಂಬಿವರ ಹೊರತು ಅಭ್ಯರ್ಥಿ ಬರೆದು ನೀಡುವ ಇನ್ನೋರ್ವ ಕೂಡಾ ಚುನಾವ ಣಾಧಿಕಾರಿಯ ಕೊಠಡಿಗೆ ಪ್ರವೇಶಿಸ ಬಹುದಾಗಿದೆ. ಸೂಕ್ಷ್ಮ ತಪಾಸಣೆ ಸಮಯದಲ್ಲಿ ಎಲ್ಲಾ ಅಭ್ಯರ್ಥಿಗಳ ನಾಮಪತ್ರಿಕೆಗಳನ್ನು ಪರಿಶೀಲಿಸುವುದ ಕ್ಕಿರುವ ಸೌಕರ್ಯ ಇವರಿಗೆ ಲಭಿಸುವುದು. ಸೂಕ್ಷ್ಮ ತಪಾಸಣೆಯ ಬಳಿಕ ಸ್ವೀಕರಿಸಿದ ನಾಮಪತ್ರಗಳನ್ನು ಸಲ್ಲಿಸಿದ ಅಭ್ಯರ್ಥಿಗಳ ಯಾದಿಯನ್ನು ರಿಟರ್ನಿಂಗ್ ಆಫೀಸರ್ ಸಿದ್ಧಪಡಿಸಿ ಪ್ರಕಟಿಸುವರು. ಕಾಸರಗೋಡು ಜಿಲ್ಲೆಯ ವಿವಿಧ ಸ್ಥಳೀಯಾಡಳಿತ ಸಂಸ್ಥೆಗಳ ವಾರ್ಡ್ಗಳಿಗೆ, ಡಿವಿಶನ್ಗಳಿಗಾಗಿ ಇದುವರೆದೆ 5475 ನಾಮಪತ್ರಗಳು ಸಲ್ಲಿಸಲ್ಪಟ್ಟಿವೆ. 4219 ಅಭ್ಯರ್ಥಿಗಳು ಇದುವರೆಗೆ ನಾಮಪತ್ರ ಸಲ್ಲಿಸಿದ್ದಾರೆ.







