ಕಾಸರಗೋಡು: ಸ್ಥಳೀಯಾಡಳಿತ ಸಂಸ್ಥೆಗಳಿಗೆ ನಡೆಯಲಿರುವ ಚುನಾವಣೆಯಲ್ಲಿ ಮೀಸಲಾತಿ ವಾರ್ಡ್‌ಗಳನ್ನು ಗುರುತಿಸಲು ಹೊಸ ಆಪ್‌ಗೆ ರೂಪು ನೀಡಲು ರಾಜ್ಯ ಚುನಾವಣಾ ಆಯೋಗ ತೀರ್ಮಾನಿಸಿದೆ. ಇನ್‌ಫರ್ಮೇಷನ್ ಕೇರಳ ಮಿಷನ್ ಆಪ್‌ನ್ನು ಈಗಾಗಲೇ ಅಭಿವೃದ್ಧಿ ಪಡಿಸಿದೆ. ಅದರ ಸಹಾಯದೊಂದಿಗೆ ಮೀಸಲಾತಿ ವಾರ್ಡ್‌ಗಳನ್ನು ಗುರುತಿಸಲಾಗುವುದು. ವಾರ್ಡ್‌ಗಳ ಜನಸಂಖ್ಯೆ ಮತ್ತು ಮೀಸಲಾತಿ ವಿಭಾಗದವರ ಜನಸಂಖ್ಯೆಯನ್ನು ಪರಿಶೀಲಿಸಿ ಅದರ ಆಧಾರದಲ್ಲಿ ಮೀಸಲಾತಿ ವಾರ್ಡ್‌ಗಳನ್ನು ಆರಿಸಲಾಗುವುದು. ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಮುಂದಿನ ತಿಂಗಳ ಕೊನೆಯ ವಾರದಲ್ಲಿ ಚೀಟಿ ಎತ್ತುವ ಮೂಲಕ ಮೀಸಲಾತಿ ವಾರ್ಡ್‌ಗಳನ್ನು ನಿರ್ಧರಿಸಲಾಗುವುದು. ಸ್ಥಳೀಯಾಡಳಿತ ಸಂಸ್ಥೆಗಳ ಅಧ್ಯಕ್ಷಸ್ಥಾನಕ್ಕಿರುವ ಮೀಸಲಾತಿಯನ್ನು ನಂತರ ರಾಜ್ಯ ಚುನಾವಣಾ ಅಧಿಕಾರಿಯವರು ಮುಂದಿನ ತಿಂಗಳು ಆರಿಸಿ ಘೋಷಿಸುವರು.
