ಸ್ಥಳೀಯಾಡಳಿತ ಚುನಾವಣೆ: ಹತ್ತೊಂಬತ್ತು ಪಂಚಾಯತ್ಗಳ ಮೀಸಲಾತಿ ಕ್ರಮ ಪೂರ್ಣ

ಕಾಸರಗೋಡು: ಸ್ಥಳೀಯಾಡಳಿತ ಸಂಸ್ಥೆಗಳಿಗೆ ನಡೆಯಲಿರುವ ಚುನಾವಣೆಯ ಪೂರ್ವಭಾವಿಯಾಗಿ ನಡೆಸಲಾಗುತ್ತಿರುವ ವಾರ್ಡ್ ವಿಭಜನೆಗಳ ಪೈಕಿ ಮಂಜೇಶ್ವರ, ಕಾರಡ್ಕ ಮತ್ತು ಹೊಸದುರ್ಗ ಬ್ಲೋಕ್ಗೊಳಪಟ್ಟ 19 ಗ್ರಾಮ ಪಂಚಾಯತ್ಗಳ ವಾರ್ಡ್ ವಿಭಜನೆ ಪ್ರಕ್ರಿಯೆ ನಿನ್ನೆ ಪೂರ್ಣಗೊಂಡಿದೆ. ಇನ್ನು ಕಾಸರಗೋಡು, ನೀಲೇಶ್ವರ ಮತ್ತು ಪರಪ್ಪ ಬ್ಲೋಕ್ಗಳಿಗೊಳಪಟ್ಟ ವಾರ್ಡ್ಗಳ ಮೀಸಲು ಕ್ರಮ ಇಂದು ಬೆಳಿಗ್ಗೆ ಆರಂಭಗೊAಡಿದೆ.
ಬ್ಲೋಕ್ ಪಂಚಾಯತ್ಗಳ ವಾರ್ಡ್ಗಳ ಮೀಸಲಾತಿ ಅ. 18 ಮತ್ತು ಜಿಲ್ಲಾ ಪಂಚಾಯತ್ನ ವಾರ್ಡ್ಗಳ ಮೀಸಲಾತಿ ಆಯ್ಕೆ ಅ.21ರಂದು ನಡೆಯಲಿದೆ. ಅದೃಷ್ಠ ಚೀಟಿ ಎತ್ತುವ ಮೂಲಕ ಮೀಸಲಾತಿ ವಾರ್ಡ್ಗಳನ್ನು ಆರಿಸಲಾಗುತ್ತಿದೆ. ನಿನ್ನೆ ಪೂರ್ಣಗೊಂಡ ಗ್ರಾಮ ಪಂಚಾಯತ್ಗಳ ಮೀಸಲಾತಿ ವಾರ್ಡ್ಗಳು ಕ್ರಮವಾಗಿ ಇಂದಿದೆ.
ಕುAಬ್ಡಾಜೆ ಪಂಚಾಯತ್ ಒಡಂಬಳ (ವಾರ್ಡ್ 8), ಪರಿಶಿಷ್ಟ ಜಾತಿ ಮೀಸಲು ಐತ್ತಡ್ಕ (ವಾರ್ಡ್ ನಂಬ್ರ 4), ಬೆಳಿಂಜೆ (6), ಗಾಡಿಗುಡ್ಡೆ (7), ಗೋಸಾಡ (10), ಜಯನಗರ (11), ಅಗಲ್ಪಾಡಿ (12) ಮತ್ತು ಉಬ್ರಂಗಳ (13) ಎಂಬ ವಾರ್ಡ್ಗಳನ್ನು ಮಹಿಳಾ ಮೀಸಲಾತಿ ವಾರ್ಡ್ಗಳನ್ನಾಗಿ ಆರಿಸಲಾಗಿದೆ.
ದೇಲಂಪಾಡಿ ಮಯ್ಯಳ- 17- ಪರಿಶಿಷ್ಟ ಜಾತಿ, ಮೀಸಲು ವಾರ್ಡ್ಗಳನ್ನಾಗಿ ಹಾಗೂ ಊಜಂಪಾಡಿ (1)ನ್ನು ಪರಿಶಿಷ್ಟ ಪಂಗಡ ಮೀಸಲಾತಿ ವಾರ್ಡ್ನ್ನಾಗಿ ಆರಿಸಲಾಗಿದೆ. ಪರಪ್ಪ (4), ಪುದಿಯಂಬಲ (5), ಪಯರಡ್ಕ (8), ಮಲಂಪಾರ (9), ಕಾಟಿಪ್ಪಾಡ (10), ಬಳವಂತಡ್ಕ (11), ಪಾಂಡಿ (12), ಎಡಪರಂಬ (14) ಮತ್ತು ಮೊಗರು (15) ಎಂಬೀ ವಾರ್ಡ್ಗಳನ್ನು ಮಹಿಳಾ ಮೀಸಲಾತಿ ವಾರ್ಡ್ಗಳನ್ನಾಗಿ ಆರಿಸಲಾಗಿದೆ.
ಮುಳಿಯಾರು, ಬೋವಿಕ್ಕಾನ (13) ಪರಿಶಿಷ್ಟ ಜಾತಿ ಮೀಸಲಾತಿ ವಾರ್ಡ್ಗಳನ್ನಾಗಿ ಆರಿಸಲಾಗಿದೆ. ಚೂರಿಮೂಲೆ (1), ಪೊವ್ವಲ್ (2), ಬೆಂಚ್ ಕೋರ್ಟ್ (3), ಮಲ್ಲ (4), ಪಾನ್ನೂರು (7), ಕೋಟೂರು (8), ಕಾನತ್ತೂರು (9), ಅಲೂರು (15) ಮತ್ತು ನೆಲ್ಲಿಕಟ್ಟೆ ವಾರ್ಡ್ (17)ನ್ನು ಮಹಿಳೆಯರಿಗಾಗಿ ಮೀಸಲಿರಿಸಲಾಗಿದೆ.
ಬೆಳ್ಳೂರು: ಬಸ್ತಿ (9), ಪರಿಶಿಷ್ಟ ಜಾತಿ ಮಹಿಳಾ ಮೀಸಲಾತಿ, ಪನಯಾಲ (13)ನ್ನು ಪರಿಶಿಷ್ಟ ಜಾತಿ ವಾರ್ಡ್ಗಳನ್ನಾಗಿ ಆರಿಸಲಾಗಿದೆ. ಬಜೆ (2) ಕಾಯರ್ ಪದವು (5) ನೆಟ್ಟಣಿಗೆ (6), ಪಳ್ಳಪ್ಪಾಡಿ (7), ಬೆಳ್ಳೂರು (10) ಮತ್ತು ಕಿನ್ನಿಂಗಾರು (14) ವಾರ್ಡ್ಗಳನ್ನು ಮಹಿಳೆಯರಿಗಾಗಿ ಮೀಸಲಿರಿಸಲಾಗಿದೆ.
ಕಾರಡ್ಕ: ಬೇರ್ಲ (16) ಪರಿಶಿಷ್ಟ ಜಾತಿ ಮೀಸಲು ಮತ್ತು ಮುಳ್ಳೇರಿಯಾ (3), ಆಲಂತಡ್ಕ (4), ಮುಚ್ಚಿಲೋಟ್ (5), ಮಲ್ಲಾವರ (6), ಮಿಂಚಿಪದವು (7), ಪಡಿಯತ್ತಡ್ಕ (9), ಮಂಞ್ಞಪಾರ (10) ಮತ್ತು ಆದೂರು (11)ನ್ನು ಮಹಿಳಾ ಮೀಸಲಾತಿ ವಾರ್ಡ್ಗಳನ್ನಾಗಿ ಆರಿಸಲಾಗಿದೆ.
ವರ್ಕಾಡಿ: ಪಾವೂರು (1) ಪರಿಶಿಷ್ಟ ಜಾತಿ ಮೀಸಲು, ಕೆದುಂಬಾಡಿ (3), ತೌಡುಗೋಳಿ (4), ಪಾವಲ (5), ಸುಳ್ಯಮೆ (7), ಪಾತೂರು (8), ಬೇರ್ಕುಳ (11), ಬದಿಯಾರು (13), ಧರ್ಮನಗರ (14) ಮತ್ತು ನಲ್ಲಾಕಿ (16) ಎಂಬೀ ವಾರ್ಡ್ಗಳನ್ನು ಮಹಿಳೆಯರಿಗಾಗಿ ಮೀಸಲಿರಿಸಲಾಗಿದೆ.
ಮೀಂಜ: ತಲಕಳ-15 ಪರಿಶಿಷ್ಟ ಜಾತಿ ಮೀಸಲಾತಿ, ಕಳಿಯೂರು (1), ಕೋಳ್ಯೂರು – (3), ಅರಿಯಾಳ (6), ಬಾಳಿಯೂರು (8), ಕುಳೂರು (9) ಮೂಡಂಬೈಲು (10), ಪಟ್ಟತ್ತೂರು (11), ಬೆಜ್ಜ (14) ಮತ್ತು ಗಾಂಧಿನಗರ (17) ವಾರ್ಡ್ಗಳನ್ನು ಮಹಿಳಾ ಮೀಸಲಾತಿ ವಾರ್ಡ್ಗಳನ್ನಾಗಿ ಆರಿಸಲಾಗಿದೆ.
ಮಂಗಲ್ಪಾಡಿ: ಬಂದ್ಯೋಡು (17) ಪರಿಶಿಷ್ಟ ಜಾತಿ ಮೀಸಲಾತಿ, ಮುಸೋಡಿ (1), ಉಪ್ಪಳ ಟೌನ್ (4), ಕೋಡಿಬೈಲು (5), ಸೋಂಕಾಲು (6), ಪಚ್ಚಂಬಳ (10), ಹೇರೂರು (11), ಇಚ್ಚಿಲಂಗೋಡು (12), ಮಲಂತೂರು (13), ಅಡ್ಕ (18), ಮಲ್ಲಂಗೈ (19), ಪೆರಿಂuಟಿಜeಜಿiಟಿeಜಡಿ (21) ಮತ್ತು ಮಣಿಮುಂಡ (24) ಎಂಬೀ ವಾರ್ಡ್ಗಳನ್ನು ಮಹಿಳಾ ಮೀಸಲಾತಿ ವಾರ್ಡ್ಗಳನ್ನಾಗಿ ಆರಿಸಲಾಗಿದೆ.
ಪುತ್ತಿಗೆ: ಮುಖಾರಿಕಂಡ ವಾರ್ಡ್ 13, ಪರಿಶಿಷ್ಟ ಜಾತಿ ಮೀಸಲಾತಿ, ಚೆನ್ನಕೋಡಿ (1), ದೇರಡ್ಕ (3), ಮುಂಡಿತ್ತಡ್ಕ (5), ಮುಗು (7), ಊಜಂಪದವು (8), ಕಣ್ಣೂರು (10) .ಎಡನಾಡು (12) ಮತ್ತು ಖತೀಬ್ ನಗರ (15) ಮಹಿಳಾ ಮೀಸಲಾತಿ ವಾರ್ಡ್ಗಳನ್ನಾಗಿ ಆರಿಸಲಾಗಿದೆ.
ಎಣ್ಮಕಜೆ: ಬಜಕೂಡ್ಲು- 12 ವಾರ್ಡ್ನ್ನು ಪರಿಶಿಷ್ಟ ಜಾತಿ ಮೀಸಲು, ಸಾಯಾ (1), ಕಾಟುಕುಕ್ಕೆ (4), ಪೆರ್ಲ ನೋರ್ತ್ (5), ಪೆರ್ಲ ಪೇಟೆ (6), ವಾಣೀನಗರ (9), ಕಜಂಪಾಡಿ (10) ಪೆರ್ಲ ಸೌತ್ (11), ಶೇಣಿ (15) ಮತ್ತು ಬೇಂಗಪದವು (17) ಎಂಬಿವು ಮಹಿಳಾ ಮೀಸಲಾತಿ ವಾರ್ಡ್ಗಳು.
ಪೈವಳಿಕೆ: ಪರ್ಜೊಡಿ (7) ವಾರ್ಡನ್ನು ಪರಿಶಿಷ್ಟ ಜಾತಿ, ಕುರುಡಪದವು (1), ಚಿಪ್ಪಾರು (3), ಆವಳ (5), ಕುಡಾಲ್ (13), ಪರಂಬಳ (15), ಕೊಕ್ಕೆಚ್ಚಾಲ್ (16), ಕಯ್ಯಾರ್ (17), ಅಟ್ಟೆಗೋಳಿ (18) ಪೈವಳಿಕೆ (19), ಕಳಾಯಿ (20) ಮತ್ತು ಕಾಡಂಗೋಡಿ (21) ವಾರ್ಡ್ಗಳನ್ನು ಮಹಿಳಾ ವಾರ್ಡ್ಗಳನ್ನಾಗಿ ಆರಿಸಲಾಗಿದೆ.
ಮಂಜೇಶ್ವರ: ಬಂಗ್ರಮAಜೇಶ್ವರ (16), ಪರಿಶಿಷ್ಟ ಜಾತಿ, ಮೀಸಲು, ಉದ್ಯಾವರಬೈಲು (3), ಸನ್ನಡ್ಕ (4), ಕುಂಜತ್ತೂರು ಬೈಲು (5), ಉದ್ಯಾವರ ಗುಡ್ಡೆ (8), ಬಡಾಜೆ (10), ಸತ್ಯಡ್ಕ (11), ಕನಿಲ (13), ವಾಮಂಜೂರು ಗುಡ್ಡೆ (14), ಬಾವುಟಮೂಲೆ (19), ಉದ್ಯಾವರ ಸೌತ್ (22), ಉದ್ಯಾವರ ನೋರ್ತ್ (23) ಮತ್ತು ಉದ್ಯಾವರ ಮಾಡ (24) ವಾರ್ಡ್ಗಳನ್ನು ಮಹಿಳೆಯರಿಗಾಗಿ ಮೀಸಲಿರಿಸಲಾಗಿದೆ.
ಬೇಡಡ್ಕ: ತಾರಂತಟ್ಟ (17) ಪರಿಶಿಷ್ಟ ಜಾತಿ ಮಹಿಳಾ ಮೀಸಲಾತಿ, ಕಲ್ಲಾಯಿ (2)- ಪರಿಶಿಷ್ಟ ಪಂಗಡ ಮತ್ತು ಕೊಳತ್ತೂರು (3), ಕುಂಡAಕುಳಿ (5), ಬೇಡಡ್ಕ (7), ಅರಿಚೆಪ್ಪು (8), ಸಾಯಂ (9), ಮುನ್ನಾಡು (11), ವಾನಡ್ಕ (14), ಅಂಬಿಲಾಡಿ (15) ಮತ್ತು ವೇಳಾಯಿ (16), ಎಂಬೀ ವಾರ್ಡ್ಗಳನ್ನು ಮಹಿಳೆಯರಿಗಾಗಿ ಮೀಸಲಿರಿಸಲಾಗಿದೆ.
ಕುಟ್ಟಿಕ್ಕೋಲು ಪಡುಪ್ಪು (5), ನೆಲ್ಲಿತ್ತಾವು (14) ಎಂಬಿವುಗಳನ್ನು ಪರಿಶಿಷ್ಟ ಪಂಗಡ ಮಹಿಳಾ ಮೀಸಲಾತಿ ವಾರ್ಡ್ಗಳು ಮತ್ತು ಬೇತೂರುಪಾರ (1) ವಾರ್ಡನ್ನು ಪರಿಶಿಷ್ಟ ಪಂಗಡ ಮೀಸಲಾತಿ, ಒಟ್ಟು ಮಾವುಂಗಾಲ್ (4), ಬಂದಡ್ಕ (6), ಪಾಲಾರ್ (7), ಬೇತಲಂ(8) ಏಣಿಯಾಡಿ (10), ಪರಿವೇಡಗಂ (12) ಮತ್ತು ಕುಟ್ಟಿಕ್ಕೋಲ್ (17) ಎಂಬೀ ವಾರ್ಡ್ಗಳನ್ನು ಮಹಿಳಾ ಮೀಸಲಾತಿ ವಾರ್ಡ್ಗಳನ್ನಾಗಿ ಆರಿಸಲಾಗಿದೆ.

You cannot copy contents of this page