ಮಂಜೇಶ್ವರ: ಸೌಲಭ್ಯಗಳು ಅರ್ಹರಿಗೆ, ಭ್ರಷ್ಟಾಚಾರವಿಲ್ಲದ ಅಭಿವೃದ್ಧಿಗಾಗಿ ಎಸ್ಡಿಪಿಐಗೆ ಮತ ಚಲಾಯಿಸಿರಿ ಎಂಬ ಘೋಷಣೆಯೊಂದಿಗೆ ಸ್ಥಳೀಯಾಡಳಿತ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಎಸ್ಡಿಪಿಐ ಜಿಲ್ಲಾ ಸಮಿತಿ ಸದಸ್ಯ ಹಾಗೂ ಮಂಜೇಶ್ವರ ಪಂಚಾಯತ್ ನ ಜವಾಬ್ದಾರಿ ಹೊಂದಿರುವ ಅಶ್ರಫ್ ಬಡಾಜೆ ತಿಳಿಸಿದ್ದಾರೆ. ಮಂಜೇಶ್ವರ ಗ್ರಾಮ ಪಂಚಾಯತ್ ಚುನಾವಣೆ ಯಲ್ಲಿ ಸ್ಪರ್ಧಿಸುವ ಎಸ್ಡಿಪಿಐ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಅವರು ಪ್ರಕಟಿಸಿದರು. ಪಕ್ಷದ ಮಂಜೇಶ್ವರ ಮಂಡಲ ಅಧ್ಯಕ್ಷ ಶರೀಫ್ ಪಾವೂರು ಮಚ್ಚಂಪಾಡಿ ವಾರ್ಡ್ನಲ್ಲೂ, ಮಂಡಲ ಆರ್ಗನೈಸರ್ ಯಾಕೂಬ್ ಹೊಸಂಗಡಿ ಕಜೆಯಲ್ಲಿ ಸ್ಪರ್ಧಿಸಲಿದ್ದಾರೆ. ಪಂಚಾಯತ್ ಸಮಿತಿ ಸದಸ್ಯ ಹಾರಿಸ್ ಉದ್ಯಾವರ ಕುಂಡುಕೊಳಕೆಯಲ್ಲಿ, ಎಸ್ಡಿಪಿಐ ಬೆಂಬಲದೊಂದಿಗೆ ಅಬೂಬಕ್ಕರ್ ಸಿದ್ದಿಕ್ ಯಾನೆ ರೈಶಾದ್ ಉದ್ಯಾವರ ಗುತ್ತು ವಾರ್ಡ್ನಲ್ಲಿ ಸ್ಪರ್ಧಿಸುವರು. ಪಂಚಾಯತ್ನ 20 ವಾರ್ಡ್ಗಳಲ್ಲಿ ಸ್ಪರ್ಧಿಸಲು ಎಸ್ಡಿಪಿಐ ಪಂಚಾಯತ್ ಚುನಾವಣಾ ಸಮಿತಿ ತೀರ್ಮಾನಿಸಿದೆ. ಮಂಜೇಶ್ವರ ಬ್ಲೋಕ್ ಪಂಚಾಯತ್ನ ಕುಂಜತ್ತೂರು, ಮಂಜೇಶ್ವರ, ಬಡಾಜೆ ಡಿವಿಜನ್ನಲ್ಲಿ, ಜಿಲ್ಲಾ ಪಂಚಾಯತ್ನ ವರ್ಕಾಡಿ, ಮಂಜೇಶ್ವರ ಡಿವಿಶನ್ಗಳಲ್ಲಿ ಪಕ್ಷದ ಅಭ್ಯರ್ಥಿಗಳು ಸ್ಪರ್ಧಿಸುವರು. ಹೆಚ್ಚಿನ ವಾರ್ಡ್ಗಳಲ್ಲೂ ಎಸ್ಡಿಪಿಐ ಅಭ್ಯರ್ಥಿಗಳಿಗೆ ಗೆಲುವು ಸಾಧಿಸಲು ಹಾಗೂ ಆಡಳಿತ ಸಮಿತಿ ರೂಪೀಕರಿ ಸಲಿರುವ ರಾಜಕೀಯ ಸನ್ನಿವೇಶ ಪಂ ಚಾಯತ್ನಲ್ಲಿದೆಯೆಂದು ಅವರು ತಿಳಿಸಿದ್ದಾರೆ. ಪ್ರಸ್ತುತ ಮುಸ್ಲಿಂ ಲೀಗ್-ಕಾಂಗ್ರೆಸ್-ಬಿಜೆಪಿ ಒಕ್ಕೂಟ ದುರಾಡಳಿತ ನಡೆಸುತ್ತಿದೆಯೆಂದು ಪಂಚಾಯತ್ನ ಅಭಿವೃದ್ಧಿ ಮುನ್ನಡೆಗೆ ಸಾಧ್ಯವಾಗಿಲ್ಲವೆಂದು ಅವರು ಆರೋಪಿಸಿದ್ದಾರೆ. ಎಸ್ಡಿಪಿಐ ಜಿಲ್ಲಾ ಸಮಿತಿ ಸದಸ್ಯ ಅಶ್ರಫ್ ಬಡಾಜೆ, ಮಂಜೇಶ್ವರ ಮಂಡಲಕಾರ್ಯಾಧ್ಯಕ್ಷ ಇಕ್ಭಾಲ್, ಸೆಕ್ರೆಟರಿ ಶಬೀರ್, ಶಂಸುದ್ದೀನ್ ಮಂಜೇಶ್ವರ,ಹಾರಿಸ್ ಸುಬೈರ್, ರಿಯಾಸ್ ಕುನ್ನಿಲ್ ಎಂಬಿವರು ಪತ್ರಿಕಾಗೋಷ್ಠಿಯಲ್ಲಿ ಪಂಚಾಯತ್ನ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದ್ದಾರೆ.







