ಸ್ಥಳೀಯಾಡಳಿತ ಚುನಾವಣೆ: ಸ್ಪಷ್ಟಗೊಂಡ ಚುನಾವಣಾ ಚಿತ್ರಣ; ಇನ್ನುಅಬ್ಬರದ ಪ್ರಚಾರ  ದಿನಗಳು

ಕಾಸರಗೋಡು: ರಾಜ್ಯದಲ್ಲಿ ಸ್ಥಳೀಯಾಡಳಿತ ಸಂಸ್ಥೆಗಳಿಗೆ ಡಿಸೆಂಬರ್ 9 ಮತ್ತು 11ರಂದು ನಡೆಯಲಿರುವ ಚುನಾವಣೆಗಿರುವ ನಾಮಪತ್ರ ಸಲ್ಲಿಕೆ, ಅವುಗಳ ಸೂಕ್ಷ್ಮ ಪರಿಶೀಲನೆ ನಡೆದ ಬಳಿಕ ನಾಮಪತ್ರಗಳ ಹಿಂತೆಗೆತ ಪ್ರಕ್ರಿಯೆ ನಿನ್ನೆ ಪೂರ್ಣಗೊಂಡಿತು. ಬಳಿಕ ಸ್ಪರ್ಧಾಕಣದಲ್ಲಿ ಉಳಿದಿರುವ ಅಭ್ಯರ್ಥಿಗಳ ಸ್ಪಷ್ಟ ಚಿತ್ರಣ ಬಹಿರಂಗಗೊAಡಿದ್ದು, ಅದರ ಬೆನ್ನಲ್ಲೇ ಅಬ್ಬರದ ಪ್ರಚಾರವೂ ಆರಂಭಗೊAಡಿತು.
ಕಾಸರಗೋಡು ಜಿಲ್ಲೆಯಲ್ಲಿ ಒಟ್ಟು 2786 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ. ಇದರಲ್ಲಿ 1432 ಮಹಿಳೆಯರು ಮತ್ತು 1359 ಪುರುಷ ಅಭ್ಯರ್ಥಿಗಳಾಗಿದ್ದಾರೆ. ಕಾಸರಗೋಡು, ಕಣ್ಣೂರು, ವಯನಾಡು, ಕಲ್ಲಿಕೋಟೆ, ಮಲಪ್ಪುರಂ, ಪಾಲಕ್ಕಾಡ್, ತೃಶೂರು ಜಿಲ್ಲೆಗಳಲ್ಲಿ ಡಿ. 11ರಂದು ಚುನಾವಣೆ ನಡೆಯ ಲಿದೆ. ತಿರುವನಂತಪುರ, ಕೊಲ್ಲಂ, ಪತ್ತನಂತಿಟ್ಟ, ಆಲಪ್ಪುಳ, ಕೋಟ್ಟಯಂ, ಇಡುಕ್ಕಿ, ಎರ್ನಾಕುಳಂ ಜಿಲ್ಲೆಗಳಲ್ಲಿ ಡಿ. 9ರಂದು ಚುನಾವಣೆ ನಡೆಯಲಿದೆ. ಚುನಾವಣಾ ಆಯೋಗದ ಲೆಕ್ಕಾಚಾರದಂತೆ ರಾಜ್ಯದಲ್ಲಿ ಒಟ್ಟು 72005 ಮಂದಿ ಸ್ಪರ್ಧಾಕಣದಲ್ಲಿದ್ದಾರೆ. ಇದರಲ್ಲಿ 37786 ಮಹಿಳೆಯರು, 34218 ಪುರುಷ ಅಭ್ಯರ್ಥಿಗಳಾಗಿದ್ದಾರೆ. ಅಲ್ಲದೆ ಇಬ್ಬರು ಮಂಗಳಮುಖಿಯರೂ ಸ್ಪರ್ಧಾ ಕಣದಲ್ಲಿದ್ದಾರೆ. ರಾಜ್ಯದ 1200 ಸ್ಥಳೀಯಾಡಳಿತ ಸಂಸ್ಥೆಗಳಲ್ಲಾಗಿ ಒಟ್ಟು 23612 ವಾರ್ಡ್ಗಳಿದ್ದು, ಇದರಲ್ಲಿ ಕಣ್ಣೂರು ಜಿಲ್ಲೆಯ ಮಟ್ಟನ್ನೂರು ನಗರಸಭೆಯ ಆಡಳಿತ ಸಮಿತಿಯ ಕಾಲಾವಧಿ ಕೊನೆಗೊಂಡಿಲ್ಲ. ಇದರಿಂದ ಆ ನಗರಸಭೆಯನ್ನು ಹೊರತುಪಡಿಸಿ ಉಳಿದ 1199 ಸ್ಥಳೀಯಾಡಳಿತ ಸಂಸ್ಥೆಗಳಲ್ಲಾಗಿ ಒಟ್ಟು 23576 ವಾರ್ಡ್ಗಳಿಗೆ ಚುನಾವಣೆ ನಡೆಯಲಿದೆ. ಈ ಚುನಾವಣೆಯಲ್ಲಿ ಶಬರಿಮಲೆ ಚಿನ್ನ ಕಳವು ಪ್ರಕರಣವನ್ನು ಒಂದು ಪ್ರಧಾನ ಚುನಾವಣಾ ಅಸ್ತ್ರವನ್ನಾಗಿಸಿ ಬಿಜೆಪಿ ಪ್ರಚಾರಕ್ಕಿ ಳಿದಿದೆ. ಇದೇ ವೇಳೆ ಭ್ರಷ್ಟಾ ಚಾರ,ಸ್ವಜನ ಪಕ್ಷಪಾತ, ಬೆಲೆಯೇರಿಕೆ ಇತ್ಯಾದಿಗಳನ್ನು ಯುಡಿಎಫ್ ಪ್ರಧಾನ ವಿಷಯವನ್ನಾಗಿಸಿದೆ. ಇದೇ ಸಂದರ್ಭದಲ್ಲಿ ಕಳೆದ 5 ವರ್ಷದಲ್ಲಿ ಜ್ಯಾರಗೊಳಿಸಲಾದ ವಿವಿಧ ಕಲ್ಯಾಣ ಯೋಜನೆಗಳು ಮತ್ತು ಅಭಿವೃದ್ಧಿ ಯೋಜನೆಗಳನ್ನು ಎಡರಂಗ ಚುನಾವಣಾ ಪ್ರಚಾರವನ್ನಾಗಿಸಿ ಕೊಂಡಿದೆ.

You cannot copy contents of this page