ತಿರುವನಂತಪುರ: ರಾಜ್ಯದಲ್ಲಿ ಸ್ಥಳೀಯಾಡಳಿತ ಚುನಾವಣೆ ಡಿಸೆಂಬರ್ 10ರ ಮೊದಲು ನಡೆ ಯುವ ಸಾಧ್ಯತೆ ಇದೆ. ನವೆಂಬರ್ 10ರ ಮುಂಚೆ ಈ ಸಂಬಂಧ ಘೋಷಣೆ ಉಂಟಾಗಲಿದೆ ಎಂದು ತಿಳಿದು ಬಂದಿದೆ. 1200 ಸ್ಥಳೀಯಾ ಡಳಿತ ಸಂಸ್ಥೆಗಳ ಪೈಕಿ ಮಟ್ಟನ್ನೂರು ನಗರಸಭೆಯನ್ನು ಹೊರತುಪಡಿಸಿ ಚುನಾವಣೆ ನಡೆಯಲಿದೆ. ಮೀಸ ಲಾತಿ ವಾರ್ಡ್‌ಗಳ ಆಯ್ಕೆ ಈಗಾ ಗಲೇ ಪೂರ್ಣಗೊಂಡಿದೆ. ಸ್ಥಳೀ ಯಾಡಳಿತ ಸಂಸ್ಥೆಗಳ ಅಧ್ಯಕ್ಷ, ಅಧ್ಯಕ್ಷೆ ಮೀಸಲಾತಿ ನಿರ್ಧಾರ ಹಾಗೂ ಅಂತಿಮ ಮತದಾರರ ಪಟ್ಟಿ ಬಿಡುಗಡೆ ಇನ್ನಷ್ಟೇ ನಡೆಯಬೇಕಾಗಿದೆ. ಅಧ್ಯಕ್ಷರ ನಿರ್ಧಾರ ಈ ತಿಂಗಳಲ್ಲಿ ಪೂರ್ತಿ ಯಾಗಲಿದೆ. ೨೫ರಂದು ಮತದಾರರ ಪಟ್ಟಿ ಪ್ರಕಟಿಸಲಾಗುವುದು. ಇzರೊಂದಿಗೆ ಚುನಾವಣಾ ಘೋಷಣೆ ಸಿದ್ಧತೆಗಳಿಗೆ ಚುನಾವಣಾ ಆಯೋಗ ಮುಂದಾಗಲಿದೆ. ಡಿಸೆಂಬರ್ ೨೧ಕ್ಕೆ ಪ್ರಸ್ತುತವಿರುವ ಆಡಳಿತ ಸಮಿತಿಯ ಕಾಲಾವಧಿ ಕೊನೆಗೊಳ್ಳಲಿದೆ.
