ಕಾಸರಗೋಡು: ಸ್ಥಳೀಯಾಡಳಿತ ಸಂಸ್ಥೆಗಳಿಗೆ ನಡೆದ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಯುಡಿಎಫ್ಗೆ ಅತೀ ಹೆಚ್ಚು ಮತಗಳು ಲಭಿಸಿವೆ. ಅಂದರೆ ಎಡರಂಗಕ್ಕಿ೦ತ 57,595 ಹೆಚ್ಚು ಮತಗಳು ಯುಡಿಎಫ್ಗೆ ಲಭಿಸಿದೆ.
ಯುಡಿಎಫ್ಗೆ ಒಟ್ಟು 3,57,478 ಮತಗಳು (ಶೇ. 42.92) ಲಭಿಸಿದರೆ, ಎಡರಂಗಕ್ಕೆ 2,99,883 (ಶೇ.36) ಮತಗಳು ಲಭಿಸಿದೆ. ಇನ್ನು ಬಿಜೆಪಿ ನೇ ತೃತ್ವದ ಎನ್ಡಿಎಗೆ 1,66,868 (ಶೇ. 20.03) ಮತಗಳು ಲಭಿಸಿದೆ. ಇತರ ರಿಗೆ ಶೇ. 1.05 ಮತಗಳು ಲಭಿಸಿವೆ.
ಜಿಲ್ಲೆಯಲ್ಲಿ ಒಟ್ಟು 11,12,190 ಮತದಾರರಿದ್ದು, ಅದರಲ್ಲಿ ಈ ಚುನಾವಣೆಯಲ್ಲಿ 8,32,923 (ಶೇ 74.89) ಮಂದಿ ಮತ ಚಲಾಯಿಸಿದ್ದಾರೆ. ಇದೇ ಸಂದರ್ಭದಲ್ಲಿ ಮಂಗಲ್ಪಾಡಿ ಪಂಚಾಯತ್ನ ಒಂದು ವಾರ್ಡ್ನಲ್ಲಿ ಯುಡಿಎಫ್ ಮತ್ತು ಮಡಿಕೈ ಪಂಚಾಯತ್ನಲ್ಲಿ ಒಂದು ವಾರ್ಡ್ನಲ್ಲಿ ಎಡರಂಗದ ಉಮೇದ್ವಾರರು ಅವಿರೋಧವಾಗಿ ಆಯ್ಕೆಗೊಂಡಿರುವ ಹಿನ್ನೆಲೆಯಲ್ಲಿ ಈ ಎರಡು ವಾರ್ಡ್ಗಳ ಮತಗಳು ಈ ಮೇಲಿನ ಪಟ್ಟಿಯಲ್ಲಿ ಒಳಗೊಂಡಿಲ್ಲ.
ಜಿಲ್ಲೆಯ ಗ್ರಾಮ ಮತ್ತು ನಗರ ಪ್ರದೇಶಗಳಲ್ಲೂ ಯುಡಿಎಫ್ಗೆ ಅತೀ ಹೆಚ್ಚು ಮತಗಳು ಲಭಿಸಿವೆ. ಗ್ರಾಮೀಣ ಪ್ರದೇಶಗಳಲ್ಲಿ ಯುಡಿಎಫ್ಗೆ 3,12,634 ಯುಡಿಎಫ್ಗೆ ಲಭಿಸಿದರೆ, ಎಡರಂಗಕ್ಕೆ 2,62,587 ಮತ್ತು ಎನ್ ಡಿಎಗೆ 1,51,649 ಮತಗಳು ಲಭಿಸಿವೆ. ಜಿಲ್ಲಾ ಪಂಚಾಯತ್ನ ಆಡಳಿತೆಯನ್ನು ಎಲ್ಡಿಎಫ್ ತನ್ನ ಕೈಯ್ಯಲ್ಲೇ ಉಳಿಸಿಕೊಳ್ಳುವುದರಲ್ಲಿ ಸಫಲವಾಗಿದ್ದರೂ, ಒಟ್ಟಾರೆಯಾಗಿ ಜಿಲ್ಲೆಯಲ್ಲಿ ಯುಡಿಎಫ್ಗೆ 57975 ಮತಗಳು ಹೆಚ್ಚಾಗಿ ಲಭಿಸಿವೆ.
ಕಾಸರಗೋಡು ನಗರಸಭೆಯಲ್ಲಿ ಯುಡಿಎಫ್- 14161, ಎಲ್ಡಿಎಫ್- 5643 ಮತ್ತು ಎನ್ಡಿಎ 7166 ಮತಗಳು ಲಭಿಸಿವೆ. ಉಳಿದಂತೆ ಹೊಸದುರ್ಗ ನಗರಸಭೆಯಲ್ಲಿ ಯುಡಿಎಫ್ -20,111, ಎಲ್ಡಿಎಫ್- 19,399 ಮತ್ತು ಎನ್ಡಿಎಗೆ -5621 ಮತಗಳು ಲಭಿಸಿವೆ.
ನೀಲೇಶ್ವರ ನಗರಸಭೆಯಲ್ಲಿ ಯುಡಿಎಫ್ 10,572, ಎಲ್ಡಿಎಫ್- 12,254 ಮತ್ತು ಎನ್ಡಿಎಗೆ- 2432 ಮತಗಳು ಲಭಿಸಿದೆ. ನಗರಸಭೆಗಳ ಪೈಕಿ ನೀಲೇಶ್ವರ ನಗರಸಭೆಯಲ್ಲಿ ಮಾತ್ರವೇ ಎಡರಂಗ ಮುನ್ನಡೆ ಸಾಧಿಸಿದೆ.







