ಬಾಯಾರು- ಕನಿಯಾಲ ರಸ್ತೆ ಅಭಿವೃದ್ಧಿಗೆ ಸ್ಥಳೀಯರ ಒತ್ತಾಯ: ಶೋಚನೀಯಾವಸ್ಥೆಯಿಂದ ಸಂಚಾರ ಸಮಸ್ಯೆ

ಪೈವಳಿಕೆ: ಬಾಯಾರು-ಕನಿಯಾಲ ರಸ್ತೆ ಹದಗೆಟ್ಟು, ಗಿಡ ಮರಗಳು ರಸ್ತೆಗೆ ಭಾಗಿ ಸಂಚಾರಕ್ಕೆ ಭೀತಿ ಸೃಷ್ಟಿಯಾಗಿದೆ. ಪೈವಳಿಕೆ ಪಂ ಚಾಯತ್ ವ್ಯಾಪ್ತಿಯ ಬಾಯಾರು ಸಮೀಪದ ಸರ್ಕುತ್ತಿ ಬಸ್ ತಂಗು ದಾಣದ ಬಳಿಯಿಂದ ಆರಂಭ ಗೊಳ್ಳುವ ಕನಿಯಾಲ ರಸ್ತೆಯ ಚೇರಾಲ್ ತನಕ ಅಲ್ಲಲ್ಲಿ ಹೊಂಡ ಗಳಿಂದ ಕೂಡಿ ಶೋಚನೀಯಾವಸ್ಥೆಗೆ ತಲುಪಿ ಸಂಚಾರಕ್ಕೆ ಭೀತಿ ಉಂಟಾಗಿರುವುದಾಗಿ ದೂರ ಲಾಗಿದೆ. ಅಲ್ಲದೆ ಭಾರೀ ತಿರುವು ಹಾಗೂ ಬದಿಯಲ್ಲಿರುವ ಮರಗಳು ರಸ್ತೆಗೆ ಭಾಗಿಕೊಂಡಿರುವುದು ಬಸ್ ಸಹಿತ ವಾಹನ ಸಂಚಾರಕ್ಕೆ ಸಮಸ್ಯೆ ಉಂಟಾಗಿದೆ. ಕಿರಿದಾದ ರಸ್ತೆ ಉದ್ದಕ್ಕೂ ಒಂದು ಬದಿಯಲ್ಲಿ ಭಾರೀ ಆಳದ ಹೊಂಡ ಆತಂಕಕ್ಕೆ ಕಾರಣವಾಗಿದೆ. ಧರ್ಮತ್ತಡ್ಕ- ಬಾಯಾರುಪದವು ತನಕ ರಸ್ತೆಯನ್ನು ಅಗಲಗೊಳಿಸಿ ಅಭಿವೃದ್ದಿ ಪಡಿಸಲಾಗಿದ್ದು, ಅದೇ ರೀತಿಯಲ್ಲಿ ಸರ್ಕುತ್ತಿಯಿಂದ ಕನಿಯಾಲ ತನಕದ ರಸ್ತೆಯನ್ನು ಅಭಿವೃದ್ದಿಪಡಿಸಿ, ಕಾಡು ಪೊದೆಗಳನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಕ್ರಮಕೈಗೊಳ್ಳ ಬೇಕೆಂದು ಊರವರು, ವಾಹನ ಚಾಲಕರು ಒತ್ತಾಯಿಸಿದ್ದಾರೆ.

RELATED NEWS

You cannot copy contents of this page