ಮುಳ್ಳೇರಿಯ: ಇಲಿ ವಿಷ ಸೇವಿಸಿ ಗಂಭೀರ ಸ್ಥಿತಿಯಲ್ಲಿ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ಕೆಂಪುಕಲ್ಲು ಲಾರಿ ಚಾಲಕ ಮೃತಪಟ್ಟನು. ದೇಲಂಪಾಡಿ ವಿಲ್ಲೇಜ್ನ ಬೆಳ್ಳಿಪ್ಪಾಡಿ ನಿವಾಸಿ ವಣ್ಣಪ್ಪ ಗೌಡ ಎಂಬವರ ಪುತ್ರ ಬಿ.ಎಚ್. ಕಿರಣ್ (36) ಮೃತಪಟ್ಟ ಯುವಕ. ಅಕ್ಟೋಬರ್ ೨೬ರಂದು ಸಂಜೆ ಪಂಜಿಕಲ್ಲು ತೂಗುಸೇತುವೆ ಸಮೀಪ ಕಿರಣ್ ಅಸ್ವಸ್ಥ ಸ್ಥಿತಿಯಲ್ಲಿ ಪತ್ತೆಯಾಗಿ ದ್ದರು. ಕೂಡಲೇ ನಾಗರಿಕರು ಇವರನ್ನು ಸುಳ್ಯದ ಕೆವಿಜಿ ಆಸ್ಪತ್ರೆಗೆ ತಲುಪಿಸಿದ್ದರು. ಅಲ್ಲಿ ನಡೆದ ತಪಾಸಣೆಯಲ್ಲಿ ಕಿರಣ್ ಇಲಿ ವಿಷ ಸೇವಿಸಿರುವುದಾಗಿ ತಿಳಿದು ಬಂದಿದೆ. ಸ್ಥಿತಿ ಗಂಭೀರವಾಗಿದ್ದುದರಿಂದ ಅವರನ್ನು ಬಳಿಕ ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆ ಮಧ್ಯೆ ನಿನ್ನೆ ಬೆಳಿಗ್ಗೆ ನಿಧನ ಸಂಭವಿಸಿದೆ. ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹವನ್ನು ಮನೆಗೆ ತಲುಪಿಸಿ ಅಂತ್ಯ ಸಂಸ್ಕಾರ ನಡೆಸಲಾಯಿತು. ಕಿರಣ್ ವಿಷ ಸೇವಿಸಲು ಕಾರಣವೇ ನೆಂದು ತಿಳಿದು ಬಂದಿಲ್ಲ. ಈ ಬಗ್ಗೆ ಆದೂರು ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತರು ತಂದೆ, ತಾಯಿ ಕುಸುಮಾವತಿ, ಪತ್ನಿ ಪುಣಿತ, ಮಕ್ಕಳಾದ ಅಭಿರಾಮ್, ದಿಯಾರಾಮ್, ಸಹೋದರ ಕೀರ್ತನ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.







