ಖಾಸಗಿ ಬಸ್‌ನ ಹಿಂಬದಿಗೆ ಲಾರಿ ಢಿಕ್ಕಿ

ಕಾಸರಗೋಡು:  ಬಸ್‌ನ   ಹಿಂಬದಿಗೆ ಲಾರಿ ಢಿಕ್ಕಿ ಹೊಡೆದು ಹಲವು ಪ್ರಯಾಣಿಕರು ಗಾಯಗೊಂಡ ಘಟನೆ ನಿನ್ನೆ ಮಧ್ಯಾಹ್ನ ರಾಷ್ಟ್ರೀಯ ಹೆದ್ದಾರಿ ತೆಕ್ಕಿಲ್‌ನಲ್ಲಿ ಸಂಭವಿಸಿದೆ.

ನಿನ್ನೆ ಮಧ್ಯಾಹ್ನ 2 ಗಂಟೆಗೆ ತೆಕ್ಕಿಲ್‌ನ ಇಳಿಜಾರಿನಲ್ಲಿ ಅಪ ಘಾತವುಂಟಾಗಿದೆ. ಕಾಸರಗೋಡಿಗೆ ಬರುತ್ತಿದ್ದ ಪ್ರತಾಪ್ ಬಸ್‌ನ ಹಿಂಬದಿಗೆ ಲಾರಿ ಢಿಕ್ಕಿ ಹೊಡೆದಿದೆ. ಈ ವೇಳೆ ನಿಯಂತ್ರಣ ತಪ್ಪಿದ ಬಸ್ ಎದುರು ಸಂಚರಿಸುತ್ತಿದ್ದ ಲಾರಿಗೆ ಬಡಿದಿದೆ. ಅಪಘಾತದಿಂದ ಎರಡು ಲಾರಿಗಳ ಮಧ್ಯೆ ಬಸ್ ಸಿಲುಕಿಕೊಂಡಿತು. ಅಪಘಾತದಿಂದ ಯಾರೂ ಗಂಭೀರ ಗಾಯಗೊಂಡಿಲ್ಲವೆಂದು ತಿಳಿದು ಬಂದಿದೆ.

You cannot copy contents of this page