ಹೊಸದುರ್ಗ: ನೀಲೇಶ್ವರ ಕರುವಾಚ್ಚೇರಿಯಲ್ಲಿ ಲಾರಿ ನಿಯಂತ್ರಣ ತಪ್ಪಿ ಮಗುಚಿದೆ. ಆದರೆ ಯಾರಿಗೂ ಅಪಾಯ ಉಂಟಾಗಿಲ್ಲ. ಮಂಗಳೂರಿನಿಂದ ಹಳೆಯ ಪೇಪರ್‌ಗಳ ಸಹಿತ ಎರ್ನಾಕುಳಂಗೆ ತೆರಳುತ್ತಿದ್ದ ಲಾರಿ ಇಂದು ಬೆಳಿಗ್ಗೆ ಮಗುಚಿದೆ. ಸರ್ವಿಸ್ ರಸ್ತೆಯಿಂದ ಪ್ರಧಾನ ರಸ್ತೆಗೆ ಸಂಚರಿಸುವ ವೇಳೆ ನಿಯಂತ್ರಣ ತಪ್ಪಿ ಮಗುಚಿದೆ. ಪೊಲೀಸರು ಸ್ಥಳಕ್ಕೆ ತಲುಪಿದ್ದಾರೆ.
