ಸಿಪಿಎಂ ಕಾಞಂಗಾಡ್ ಏರಿಯಾ  ಸಮಿತಿಯಿಂದ ಎಂ. ರಾಘವನ್ ಅಮಾನತು

ಕಾಸರಗೋಡು: ಕಾಞಂಗಾಡ್ ಏರಿಯಾ ಸಮಿತಿ ಸದಸ್ಯ ಎಂ. ರಾಘವನ್ ವಿರುದ್ಧ ಸಿಪಿಎಂ ಕ್ರಮ ಕೈಗೊಂಡಿದೆ. ಕಾಞಂಗಾಡ್ ಏರಿಯಾ ಸಮಿತಿಯಿಂದ  ಇವರನ್ನು ಹೊರಹಾಕಲಾಗಿದೆ. ಏರಿಯಾ ಸಮಿತಿಯಿಂದ ಹೊರ ಹಾಕಲಿರುವ ಕಾಞಂಗಾಡ್ ಏರಿಯಾ ಸಮಿತಿ ಸಭೆಯ ತೀರ್ಮಾನಕ್ಕೆ ಜಿಲ್ಲಾ ಸಮಿತಿ ಹಾಗೂ ಜಿಲ್ಲಾ ಸೆಕ್ರೆಟರಿಯೇಟ್ ಒಪ್ಪಿಗೆ ನೀಡಿದೆ. ರಾಘವನ್ ಪಕ್ಷಕ್ಕೆ ಕಳಂಕವುಂಟುಮಾಡುವ ರೀತಿಯ ಬಹಿರಂಗ ಪ್ರತಿಕ್ರಿಯೆಯನ್ನು ನಡೆಸಿರುವುದಾಗಿಯೂ ಇದು ಗೌರವಯುತ ಶಿಸ್ತು ಉಲ್ಲಂಘನೆಯಾಗಿದೆ ಎಂದು ಜಿಲ್ಲಾ ಕಾರ್ಯದರ್ಶಿ ಎಂ. ರಾಜಗೋಪಾಲನ್ ಸುದ್ಧಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದ್ದಾರೆ. ಸೋಮವಾರ ಪ್ರತ್ಯೇಕ ಏರಿಯಾ ಸಮಿತಿ ಸಭೆ ಸೇರಿದ ಬಳಿಕ ವಿಷಯವನ್ನು ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗಿದೆ. ವಿಪುಲೀಕೃತ ಜಿಲ್ಲಾ ಸಮಿತಿಗೆ ಕಳಂಕವೇರ್ಪಡುವ ರೀತಿಯ ಚಟುವಟಿಕೆ ನಡೆಸಿರುವುದಾಗಿ ಪಕ್ಷ ಅಭಿಪ್ರಾಯಪಟ್ಟಿದೆ. ಸಾಕಷ್ಟು  ಪರಿಗಣನೆ ಲಭಿಸಿಲ್ಲವೆಂಬ ಕಾರಣದಿಂದ ಒಂದು ವರ್ಷದ ಹಿಂದೆ ನಡೆದ ಸಿಪಿಎಂ ಜಿಲ್ಲಾ ಸಮ್ಮೇಳನದಲ್ಲೂ, ಇತ್ತೀಚೆಗೆ ನಡೆದ ಪಕ್ಷದ ವಿಶಾಲ ಸಮ್ಮೇಳನದಲ್ಲೂ ಪಾರ್ಟಿ ನಾಯಕತ್ವದ ವಿರುದ್ಧ ರಾಘವನ್ ಪ್ರತಿಕ್ರಿಯಿಸಿದ್ದರು. ಅಲ್ಲದೆ ಏರಿಯಾ ಸಮಿತಿ ಸದಸ್ಯತ್ವದಿಂದ ಹಾಗೂ ಇತರ ಹುದ್ದೆಗಳಿಂದ ತನ್ನನ್ನು ಹೊರತುಪಡಿಸಬೇಕೆಂದು ಜಿಲ್ಲಾ ಕಾರ್ಯದರ್ಶಿಗೆ ಪತ್ರ ನೀಡಿದ್ದರು.

RELATED NEWS

You cannot copy contents of this page