ಪೋಕ್ಸೋ ಪ್ರಕರಣ: ಮದ್ರಸಾ ಅಧ್ಯಾಪಕನಿಗೆ 14 ವರ್ಷ ಕಠಿಣ ಸಜೆ

ಕಾಸರಗೋಡು: ಅಪ್ರಾಪ್ತೆ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದ ಆರೋಪಿಯಾಗಿರುವ ಮದ್ರಸಾ ಅಧ್ಯಾಪಕನಿಗೆ ಹೊಸದುರ್ಗ ಪೋಕ್ಸೋ ವಿಶೇಷ ನ್ಯಾಯಾಲಯ ೧೪ ವರ್ಷ ಕಠಿಣ ಸಜೆ ಮತ್ತು 4೦,೦೦೦ ರೂ. ಜುಲ್ಮಾನೆ ವಿಧಿಸಿ ತೀರ್ಪು ನೀಡಿದೆ.

ಕಿದೂರು ಬಜಪ್ಪೆಕಡವು ಹೌಸ್‌ನ ಎ. ಅಬ್ದುಲ್ ಹಮೀದ್ (46) ಎಂಬಾತನಿಗೆ ಈ ಶಿಕ್ಷೆ ವಿಧಿಸ ಲಾಗಿದೆ. ಜುಲ್ಮಾನೆ ಪಾವತಿಸದಿದ್ದಲ್ಲಿ ಆರೋಪಿ ಒಂದು ವರ್ಷ ಮೂರು ತಿಂಗಳು ಹೆಚ್ಚು ವರಿ ಸಜೆ ಅನುಭವಿಸಬೇಕಾಗಿದೆಯೆಂದು ತೀರ್ಪಿನಲ್ಲಿ ತಿಳಿಸಲಾಗಿದೆ.

ಕುಂಬಳೆ ಪೊಲೀಸ್ ಠಾಣೆ  ವ್ಯಾಪ್ತಿಗೊಳಪಟ್ಟ ಪ್ರದೇಶದ ನಿವಾಸಿಯಾಗಿರುವ 12 ವರ್ಷದ ಬಾಲಕಿಗೆ 2023 ನವಂಬರ್‌ನಲ್ಲಿ ಹಲವು ಬಾರಿ ಮದ್ರಸಾ ತರಗತಿಯ ಕೊಠಡಿಯಲ್ಲಿ ಲೈಂಗಿಕ ಕಿರುಕುಳ ನೀಡಿ ರುವುದಾಗಿ ಆರೋಪಿಸಿ ನೀಡಲಾದ ದೂರಿನಂತೆ ಕುಂಬಳೆ ಪೊಲೀಸರು ಆರೋಪಿಯ ವಿರುದ್ಧ  ಪೋಕ್ಸೋ ಕಾನೂನು ಪ್ರಕಾರ ಪ್ರಕರಣ ದಾಖಲಿಸಿ ಕೊಂಡಿದ್ದರು. ಅಂದು ಈ ಠಾಣೆಯ ಇನ್‌ಸ್ಪೆಕ್ಟರ್ ಆಗಿದ್ದ ವಿ.ಕೆ.ಅನೀಶ್‌ಈ ಪ್ರಕರಣದ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಈ ಪ್ರಕರಣದಲ್ಲಿ ಆರೋಪಿಗೆ ಈ ಶಿಕ್ಷೆ ವಿಧಿಸಲಾಗಿದೆ.

You cannot copy contents of this page