ಸೀತಾಂಗೋಳಿ: ಯಕ್ಷಗಾನದಲ್ಲಿ ಬಣ್ಣದ ವೇಷದಲ್ಲಿ 7 ದಶಕಗಳ ಕಾಲ ಮಿಂಚಿದ ಬಣ್ಣದ ಮಹಾಲಿಂಗ ಸಂಪಾಜೆ ಯವರ ಸಂಸ್ಮರಣೆ, ಪ್ರಶಸ್ತಿ ಪ್ರದಾನ, ಯಕ್ಷಗಾನ ಬಯಲಾಟ ನಾಳೆ ಬೆಳಿಗ್ಗೆ 10ರಿಂದ ಪೆರ್ಣೆ ಶ್ರೀ ಸಾಯಿತನ್ವಿ ನಿವಾಸದಲ್ಲಿ ಜರಗಲಿದೆ. 10ಗಂಟೆಗೆ ಪ್ರತಿಷ್ಠಾನದ ಅಧ್ಯಕ್ಷ ಗೋಪಾಲಕೃಷ್ಣ ಮಾಸ್ತರ್ ಪಂಜತ್ತೊಟ್ಟಿ ಅಧ್ಯಕ್ಷತೆ ವಹಿಸುವ ಕಾರ್ಯಕ್ರಮದಲ್ಲಿ ಉದ್ಯಮಿ, ಪ್ರಾಯೋಜಕರಾದ ಶಿವಶಂಕರ ನೆಕ್ರಾಜೆ ದಂಪತಿ ಕಾರ್ಯಕ್ರಮ ಉದ್ಘಾಟಿಸು ವರು. ಯಕ್ಷಗಾನ ಕಲಾವಿದ ಜಯಾ ನಂದ ಸಂಪಾಜೆ ಸಂಸ್ಮರಣೆ ನಡೆಸುವರು.
ಸಾಹಿತಿ ಶ್ರೀಕೃಷ್ಣಯ್ಯ ಅನಂತಪುರ, ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯ ಸತೀಶ ಅಡಪ ಸಂಕಬೈಲು ಭಾಗವಹಿಸುವರು. ಕಟೀಲು ಮೇಳದ ಹಿರಿಯ ಬಣ್ಣದ ವೇಷಧಾರಿ ಸುರೇಶ್ ಕುಪ್ಪೆಪದವುರಿಗೆ ಬಣ್ಣದ ಮಹಾಲಿಂಗ ಯಕ್ಷ ಪ್ರಶಸ್ತಿ ಪ್ರದಾನ ಮಾಡಲಾಗುವುದು. ನೀರ್ಚಾಲು ಮಾಧವ ಪಾಟಾಳಿ ಯವರನ್ನು ಸನ್ಮಾನಿಸಲಾಗುವುದು. ನಿವೃತ್ತ ಪ್ರಾಂಶುಪಾಲ ಯತೀಶ್ ಕುಮಾರ್ ರೈ ಅಭಿನಂದನಾ ಭಾಷಣ ಮಾಡುವರು. ಪೆರ್ಣೆ ಶ್ರೀ ಮುಚ್ಚಿಲೋಟ್ ಭಗವತೀ ಕ್ಷೇತ್ರದ ರಮೇಶ್ ಚೆಟ್ಟಿಯಾನ್, ಪ್ರತಿಷ್ಠಾನದ ಗೌರವ ಸಲಹೆಗಾರ ಕೆ. ರಾಮ ಮುಗ್ರೋಡಿ, ಕೆ.ಸಿ. ಪಾಟಾಳಿ ಪಡುಮಲೆ, ಗೌರವಾಧ್ಯಕ್ಷ ಬಣ್ಣದ ಸುಬ್ರಾಯ ಸಂಪಾಜೆ, ಮಹಾಲಿಂಗ ಕೆ. ದೇರೇಬೈಲು, ಸಂಚಾಲಕ ತಿಮ್ಮಪ್ಪ ಪುತ್ತೂರು ಶುಭಾಶಂಸನೆಗೈಯ್ಯುವರು. ಅಪರಾಹ್ನ 1.30ರಿಂದ ತೆಂಕು ತಿಟ್ಟು ಯಕ್ಷ ಪರಂಪರೆಯ ಖ್ಯಾತ ಕಲಾವಿದರಿಂದ ‘ಸಂಪೂರ್ಣ ಶ್ರೀ ದೇವಿ ಮಹಾತ್ಮೆ’ ಯಕ್ಷಗಾನ ಬಯಲಾಟ ಪ್ರದರ್ಶನಗೊಳ್ಳಲಿದೆ.