ಉಪ್ಪಳ: ಉಪ್ಪಳ ಶ್ರೀ ಭಗವತೀ ಕ್ಷೇತ್ರದಲ್ಲಿ ವರ್ಷಾವಧಿ ಕಳಿಯಾಟ ಮಹೋತ್ಸವ ಆರಂಭಗೊಂಡಿದೆ. ಬೆಳಿಗ್ಗೆ ಭಂಡಾರ ಕ್ಷೇತ್ರದಲ್ಲಿ ಗಣಹೋಮ, ಕಳಿಯಾಟ ಮಹೋತ್ಸವಕ್ಕೆ ಗೊನೆ ಮುಹೂರ್ತ, ಚಪ್ಪರ ಮುಹೂರ್ತ, ಶ್ರೀ ನಾಗ ಸನ್ನಿಧಿಯಲ್ಲಿ ನಾಗತಂಬಿಲ, ಭಜನೆ, ಭಂಡಾರ ಆಗಮನ, ನಡಾವಳಿ ಉತ್ಸವದೊಂದಿಗೆ ನಿನ್ನೆ ಮೊದಲ ಕಳಿಯಾಟ ನಡೆಯಿತು. ಇಂದು ನಡು ಕಳಿಯಾಟ ಆರಂಭಗೊಂಡಿದೆ. ಫೆ.1ರಂದು ರಾತ್ರಿ 12ರಿಂದ ಹೂ ಮುಡಿ ದೈವ, ಭಗವತೀ ದರ್ಶನ, ಕೆಂಡಸೇವೆ, ಬಲಿ ಉತ್ಸವ, ವಿಷ್ಣುಮೂರ್ತಿ ದೈವ, ಭಂಡಾರ ನಿರ್ಗಮನದೊಂದಿಗೆ ಕಳಿಯಾಟ ಮಹೋತ್ಸವ ಸಮಾಪ್ತಿಗೊಳ್ಳಲಿದೆ.







