ಕಾಸರಗೋಡು: ನಗರದ ಅಶ್ವಿನಿ ನಗರದ ಮಿಲಾ ಶಾಪಿಂಗ್ ಸೆಂಟರ್ನಲ್ಲಿ ಕಾರ್ಯವೆಸಗುತ್ತಿರುವ ಸ್ಪರ್ಶ ಸ್ಕಿನ್ ಆಂಡ್ ಕಿಡ್ಸ್ ಕೇರ್ ಕ್ಲಿನಿಕ್ನಲ್ಲಿ ನಿನ್ನೆ ರಾತ್ರಿ ಭಾರೀ ಅಗ್ನಿ ಅನಾಹುತ ಸಂಭವಿಸಿದ್ದು, ಇದರಿಂದ ಲಕ್ಷಾಂತರ ರೂ.ಗಳ ನಷ್ಟ ಉಂಟಾಗಿದೆ. ನಿನ್ನೆ ರಾತ್ರಿ ಸುಮಾರು 11.20ರ ವೇಳೆ ಕ್ಲಿನಿಕ್ನಿಂದ ಭಾರೀ ಹೊಗೆ ಹೊರಸೂಸುವುದನ್ನು ಗಮನಿಸಿದ ಪರಿಸರ ನಿವಾಸಿಗಳು ತಕ್ಷಣ ನೀಡಿದ ಮಾಹಿತಿಯಂತೆ ಸೀನಿಯರ್ ಫಯರ್ ಆಂಡ್ ರೆಸ್ಕ್ಯೂ ಆಫೀಸರ್ ವಿ.ಎನ್. ವೇಣುಗೋಪಾಲ್ ನೇತೃತ್ವದಲ್ಲಿ ಅಗ್ನಿಶಾಮಕದಳದ ಎರಡು ಯೂನಿಟ್ ವಾಹನ ತಕ್ಷಣ ಸ್ಥಳಕ್ಕೆ ತಲುಪಿ ಸುಮಾರು 1 ಗಂಟೆ ತನಕ ನಡೆಸಿದ ಸತತ ಪ್ರಯತ್ನದಿಂದಾಗಿ ಬೆಂಕಿ ನಂದಿಸಲಾಯಿತು. ಕ್ಲಿನಿಕ್ನೊಳಗೆ ಉಸಿರುಗಟ್ಟುವಷ್ಟು ಹೊಗೆ ಬರುತ್ತಿರುವು ದರಿಂದಾಗಿ ಅಗ್ನಿಶಾಮಕದಳದವರಿಗೆ ಅದರೊಳಗೆ ಪ್ರವೇಶಿಸಲು ಸಾಧ್ಯವಾಗಲಿಲ್ಲ. ಕೊನೆಗೆ ಫ್ಯಾನ್ ಬಳಸಿ ಹೊಗೆಯನ್ನು ಹೊರ ಬರುವಂತೆ ಮಾಡಿ ಬ್ರೀದಿಂಗ್ ಅಪರೈಟ್ಸ್ ಸೆಟ್ ಧರಿಸಿ ಅಗ್ನಿಶಾಮಕದಳದವರು ಕ್ಲಿನಿಕ್ನೊಳ ನುಗ್ಗಿ ಬೆಂಕಿಯನ್ನು ನಂದಿಸುವಲ್ಲಿ ಸಫಲರಾದರು. ಕ್ಲಿನಿಕ್ನೊಳಗಿದ್ದ ಎ.ಸಿ, ಫ್ರಿಡ್ಜ್, ಫ್ಯಾನ್ಗಳು, ಕಂಪ್ಯೂಟರ್ಗಳು, ಪೀಠೋಪಕರಣಗಳು, ಔಷಧಿ ಇತ್ಯಾದಿಗಳು ಪೂರ್ಣವಾಗಿ ಬೆಂಕಿಗಾ ಹುತಿಯಾಗಿವ. ಇದರಿಂದ 25 ಲಕ್ಷ ರೂ.ಗಳ ತನಕ ನಷ್ಟ ಉಂಟಾಗಿದೆ ಯೆಂದು ಕ್ಲಿನಿಕ್ ಮಾಲಕ ಡಾ| ಗೋಪಾಲಕೃಷ್ಣ ತಿಳಿಸಿದ್ದಾರೆ. ಎ.ಸಿಯಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ತಗಲಿರಬಹುದೆಂದು ಸಂಶಯಿಸಲಾಗು ತ್ತಿದೆ. ಇದೇ ಕ್ಲಿನಿಕ್ ಬಳಿ ಹೋಟೆಲ್, ಲಾಡ್ಜಿಂಗ್, ಅಂಗಡಿ, ಜ್ಯುವೆಲ್ಲರಿ, ಕಂಪ್ಯೂಟರ್ ಸಂಸ್ಥೆ, ದಂತ ಕ್ಲಿನಿಕ್, ಹಣಕಾಸು ಸಂಸ್ಥೆ ಸೇರಿದಂತೆ ೧೫ರಷ್ಟು ಸಂಸ್ಥೆಗಳು ಕಾರ್ಯವೆಸಗುತ್ತಿವೆ. ಅಗ್ನಿಶಾಮಕದಳದ ಸಮಯೋಚಿತ ಕಾರ್ಯಾಚರಣೆಯಿಂದಾಗಿ ಬೆಂಕಿ ಇತರ ಸಂಸ್ಥೆಗಳಿಗೆ ಹರಡುವುದು ತಪ್ಪಿಹೋಗಿದೆ. ಈ ಕಾರ್ಯಾಚರಣೆ ನಡೆಸಿದ ಅಗ್ನಿಶಾಮಕದಳದಲ್ಲಿ ಸಿಬ್ಬಂದಿಗಳಾದ ಎಂ. ರಮೇಶ್, ಒ.ಕೆ. ಪ್ರಜಿತ್, ಪಿ. ರಾಜೇಶ್, ಎಸ್. ಅರುಣ್ ಕುಮಾರ್, ಜಿತು ಥೋಮಸ್, ಎಂ.ಎ. ವೈಶಾಖ್, ಹೋಂಗಾರ್ಡ್ಗಳಾದ ಎ. ರಾಜೇಂ ದ್ರನ್, ವಿ.ಜಿ. ವಿಜಿತ್ ಮತ್ತು ಕೆ. ಸುಮೇಶ್ ಎಂಬವರು ಒಳಗೊಂಡಿದ್ದರು. ಪೊಲೀಸರು, ವಿದ್ಯುನ್ಮಂಡಳಿ ಸಿಬ್ಬಂದಿಗಳು ಹಾಗೂ ಊರವರು ಈ ಕಾರ್ಯಾಚರಣೆಯಲ್ಲಿ ಸಹಕರಿಸಿದರು.
