ಹೈನುಗಾರಿಕೆಯಲ್ಲಿ ಮಲಬಾರ್ ವಲಯದ ಉತ್ತಮ ಸಾಧನೆ-ಸಚಿವೆ ಜೆ. ಚಿಂಜುರಾಣಿ

ಕಾಸರಗೋಡು: ರಾಜ್ಯದಲ್ಲಿ ಅತ್ಯಂತ ಹೆಚ್ಚು ಹಾಲು ಉತ್ಪಾದಿಸಲ್ಪಡುವುದು ಮಲಬಾರ್ ವಲಯದಲ್ಲಾಗಿದೆ ಎಂದು ಮೃಗಸಂರಕ್ಷಣೆ, ಕ್ಷೀರ ಅಭಿವೃದ್ಧಿ ಇಲಾಖೆ ಸಚಿವೆ ಜೆ. ಚಿಂಜುರಾಣಿ ನುಡಿದರು. ಪೆರ್ಲದಲ್ಲಿ ನಡೆದ ಜಿಲ್ಲಾ ಮಟ್ಟದ ಕ್ಷೀರ ಕೃಷಿಕರ ಸಂಗಮ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಅತ್ಯಂತ ಹೆಚ್ಚು ಹಾಲು ಉತ್ಪಾದಿಸುವ ಭಾರತದಲ್ಲಿ ಕೇರಳ ದ್ವಿತೀಯ ಸ್ಥಾನದ ಲ್ಲಿದೆ. ಸಮ್ಮಿಶ್ರ ಜಾತಿಯ ದನಗಳನ್ನು ಸಾಕುವುದರಿಂದಾಗಿ ಕೇರಳದಲ್ಲಿ ಉತ್ಪಾ ದನಾ ಸಾಮರ್ಥ್ಯ ಹೆಚ್ಚಲು ಕಾರಣ ವೆಂದು ಅವರು ನುಡಿದರು. ಹಲವಾರು ಯೋಜನೆಗಳನ್ನು ಹೈನು ಕೃಷಿಕರಿಗಾಗಿ ಸರಕಾರ ಆಯೋಜಿಸಿರುವುದು. ಇದರಂತೆ ಸಾಲ ತೆಗೆದು 5ರಿಂದ 10 ದನಗಳನ್ನು ಖರೀದಿಸುವ  ಕೃಷಿಕರಿಗೆ ಒಂದು ವರ್ಷದಲ್ಲಿ ಮೂರು ಲಕ್ಷ ರೂ. ವರೆಗೆ ಲಭಿಸುವ ರೀತಿಯಲ್ಲಿ ಬಡ್ಡಿ ದರದಲ್ಲಿ ರಿಯಾಯಿತಿ ನೀಡುವ ಹೊಸ ಯೋಜನೆಯೊಂದನ್ನು ಸರಕಾರ ಪರಿಗಣಿಸುತ್ತಿದೆಯೆಂದರು. ಅನ್ಯ ರಾಜ್ಯಗಳಿಂದ ದನಗಳನ್ನು ಖರೀದಿಸು ವುದರ ಬದಲಾಗಿ ಪ್ರತಿ ಜಿಲ್ಲೆಯಲ್ಲೂ ಮೂರರಂತೆ ಕರುಗಳ ಸಾಕುವ ಕೇಂದ್ರ ಗಳನ್ನು ಆರಂಭಿಸಲಾಗುವುದು ಎಂದರು.

ಕಳೆದ ಒಂದು ವರ್ಷದಲ್ಲಿ ಮಲಬಾರ್ ವಲಯದಲ್ಲಿ ಮಾತ್ರವಾಗಿ ಮಿಲ್ಮಾದ ಲಾಭ 102 ಕೋಟಿ ರೂ.ವಾ ಗಿದೆ. ಈ ಲಾಭದ 85 ಶೇ. ವೆಚ್ಚ ಮಾಡಿ ರುವುದು ಕ್ಷೀರ ಕೃಷಿಕರಿಗಿರುವ ಸೌಲಭ್ಯ ನೀಡಲಾಗಿದೆ. ಕೃಷಿಕರಿಗೆ ಚಿಕಿತ್ಸೆಗಾಗಿ ಎರಡು ಲಕ್ಷ ರೂ. ವರೆಗೆ ನೀಡುವ ಕ್ಷೀರ ಸಾಂತ್ವನಂ, ಮೃತಪಟ್ಟ ಕೃಷಿಕನ ಕುಟುಂಬಕ್ಕೆ 7 ಲಕ್ಷ ರೂ.ವರೆಗೆ ನೀ ಡುವ ವಿಮೆ ಯೋಜನೆ ಜ್ಯಾರಿಯಲ್ಲಿದೆ.

ಶಾಸಕ ಸಿ.ಎಚ್. ಕುಂಞಂಬು ಅಧ್ಯಕ್ಷತೆ ವಹಿಸಿದರು. ಕ್ಷೀರ ಇಲಾಖೆಯ ಡೈರೆಕ್ಟರ್ ಶಾಲಿನಿ ಗೋಪಿನಾಥ್ ಯೋಜನೆ ಬಗ್ಗೆ ವಿವರಿಸಿದರು. ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್ ಮುಖ್ಯ ಅತಿಥಿ ಯಾಗಿದ್ದರು. ಶಾಸಕರಾದ ಎನ್.ಎ. ನೆಲ್ಲಿಕುನ್ನು, ಬ್ಲೋಕ್ ಪಂ. ಅಧ್ಯಕ್ಷೆ ಶಮೀನ ಟೀಚರ್, ಎಣ್ಮಕಜೆ ಪಂ. ಅಧ್ಯಕ್ಷ ಜೆ.ಎಸ್. ಸೋಮಶೇಖರ್, ಮಿಲ್ಮಾ ಡೈರೆಕ್ಟರ್ ಪಿ.ಪಿ,. ನಾರಾಯಣನ್, ಪಂ. ಅಧ್ಯಕ್ಷರಾದ ಸುಬ್ಬಣ್ಣ ಆಳ್ವ, ಜಯಂತಿ, ಎಸ್. ಭಾರತಿ,ಸುಂದರಿ ಆರ್.ಶೆಟ್ಟಿ ಸಹಿತ ಹಲವರು ಭಾಗವಹಿಸಿದರು.

RELATED NEWS

You cannot copy contents of this page