ತಿರುವನಂತಪುರ: ಹಲವು ತಿಂಗಳುಗಳಿಂದ ಸಿನಿಮಾ ರಂಗದಿಂದ ದೂರವಿದ್ದ ಖ್ಯಾತ ನಟ ಮಮ್ಮುಟ್ಟಿ ಮತ್ತೆ ರಂಗಕ್ಕೆ ಮರಳಿದ್ದಾರೆ. ಅಸೌಖ್ಯ ಹಿನ್ನೆಲೆಯಲ್ಲಿ ಚಿಕಿತ್ಸೆಯಲ್ಲಿದ್ದ ಇವರು ಈಗ ಸಂಪೂರ್ಣ ಗುಣಮುಖರಾ ಗಿದ್ದು ಸಿನಿಮಾ ರಂಗದಲ್ಲಿ ಸಕ್ರಿಯ ರಾಗುವುದಾಗಿ ಅವರ ಸಹಚರನಾದ ಆಂಟೋ ಜೋಸೆಫ್ ಜೊರ್ಜ್ ಸಾಮಾಜಿಕ ಜಾಲತಾಣಗಳ ಮೂಲಕ ತಿಳಿಸಿದ್ದಾರೆ. ಅಸೌಖ್ಯದ ಸಮಯ ದಲ್ಲಿ ಅವರ ಚೇತರಿಕೆಗಾಗಿ ಪ್ರಾರ್ಥಿ ಸಿದ ಅಭಿಮಾನಿಗಳು, ಸಾರ್ವಜನಿ ಕರಿಗೆ ಕೃತಜ್ಞತೆ ಸಲ್ಲಿಸಿ ಅವರು ಪೋಸ್ಟ್ ಹಾಕಿದ್ದರು.
