ಬಾಯಿ, ಸೊಂಟದಲ್ಲಿ ಚಿನ್ನ ಬಚ್ಚಿಟ್ಟು ತಂದಾತ ಸೆರೆ

ಕೊಚ್ಚಿ: ಯುವಕನೋರ್ವ ವಿದೇಶದಿಂದ ಬರುತ್ತಿದ್ದಾಗ 160 ಗ್ರಾಂ ಚಿನ್ನವನ್ನು ತನ್ನ ಬಾಯಿ ಹಾಗೂ ಸೊಂಟದಲ್ಲಿ ಬಚ್ಚಿಟ್ಟು ತಂದಿದ್ದಾನೆ. ಕೌಲಾಲಂಪುರ ದಿಂದ ಕೊಚ್ಚಿ ನೆಡುಂಬಾಶ್ಶೇರಿ ವಿಮಾನ ನಿಲ್ದಾಣಕ್ಕೆ ತಲುಪಿದ ಕೊಡುವಳ್ಳಿ ನಿವಾಸಿ ಮುಹ ಮ್ಮದ್ ಸಾಬಿದ್‌ನನ್ನು ಕಸ್ಟಮ್ಸ್ ಅಧಿಕಾರಿಗಳು ತಪಾಸಣೆ ನಡೆಸಿದಾಗ ಚಿನ್ನ ಪತ್ತೆಯಾಗಿದೆ. ವಶಪಡಿಸಿದ ಚಿನ್ನಕ್ಕೆ 30 ಲಕ್ಷ ರೂಪಾಯಿ ಮೌಲ್ಯ ಅಂದಾಜಿಸಲಾಗಿದೆ. ಮುಹ ಮ್ಮದ್ ಸಾಬಿದ್ ತಲಾ 25 ಗ್ರಾಂ ತೂಕದ ನಾಲ್ಕು ಚಿನ್ನದ ನಾಣ್ಯಗಳನ್ನು ಬಾಯಿಯೊಳಗೆ, 60 ಗ್ರಾಂ ಚಿನ್ನವನ್ನು ಸೊಂಟಪಟ್ಟಿಯಲ್ಲಿ  ಪೇಸ್ಟ್ ರೂಪದಲ್ಲಾಗಿಸಿ ಬಚ್ಚಿಟ್ಟಿದ್ದನು. ಚಿನ್ನವನ್ನು ಅಧಿಕಾರಿಗಳು ವಶಪಡಿಸಿಕೊಂಡು ಮುಹ ಮ್ಮದ್ ಸಾಬಿದ್‌ನನ್ನು ಬಂಧಿಸಿದ್ದಾರೆ.

RELATED NEWS

You cannot copy contents of this page