ಮನೆ ಬಳಿ ಗಾಂಜಾ ಸಸಿ ನೆಟ್ಟು ಬೆಳೆಸಿದ ವ್ಯಕ್ತಿ ಸೆರೆ

ಕಾಸರಗೋಡು: ಮನೆ ಬಳಿ ಗಾಂಜಾ ಸಸಿ ನೆಟ್ಟು ಬೆಳೆ ಸಿದ ವ್ಯಕ್ತಿ ಯ ನ್ನು ಬಂದಡ್ಕ ಎಕ್ಸೈಸ್ ರೇಂಜ್ ಕಚೇರಿಯ ಇನ್‌ಸ್ಪೆಕ್ಟರ್ ಶಹಬಾಸ್ ಅಹಮ್ಮದ್ ಎ.ಪಿ ನೇತೃತ್ವದ ತಂಡ  ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದೆ.

ಕುತ್ತಿಕ್ಕೋಲು ಪೈರು ನಿವಾಸಿ ಜೋಬಿನ್ ಕುರ್ಯನ್ (35) ಬಂಧಿತ ಆರೋಪಿ. ಕುತ್ತಿಕೋಲ್‌ನ ಅಲ್ಫೋನ್ಸಾ ಎಂಬ ಮಹಿಳೆಯ ಮಾಲಕತ್ವದಲ್ಲಿರುವ ಹಿತ್ತಿಲ ಮುಂದಿನ ಬಾವಿ ಬಳಿ  ಗಾಂಜಾ ಸಸಿ ನೆಟ್ಟು ಬೆಳೆಸಿದ ಆರೋಪದಂತೆ ಈತನನ್ನು ಬಂಧಿಸಲಾಗಿದೆ. ಐಬಿ ಪ್ರಿವೆಂಟೀವ್ ಆಫೀಸರ್ ರವೀಂದ್ರನ್ ಎಂ.ಕೆ ನೀಡಿದ ಗುಪ್ತ ಮಾಹಿತಿಯಂತೆ ಈತನನ್ನು ಬಂಧಿಸಲಾಗಿದೆ. ಕಾರ್ಯಾಚರಣೆ ನಡೆಸಿದ ತಂಡದಲ್ಲಿ ಪಿ.ಒ. ಸುಜಿತ್, ಸಿಇಒಗಳಾದ ಗಣೇಶ್, ನಯನ ಎಂಬವರು ಒಳಗೊಂಡಿದ್ದರು.

You cannot copy contents of this page