ಕಾಸರಗೋಡು: ಮಸೀದಿಯ ಹಣ ಸಂಗ್ರಹವೆಂದು ತಿಳಿಸಿ ಮನೆಗೆ ತಲುಪಿ 9ರ ಹರೆಯದ ಬಾಲಕಿಯನ್ನು ಬಿಗಿದಪ್ಪಿಕೊಂಡ ವ್ಯಕ್ತಿಯನ್ನು ನಾಗರಿಕರು ಸೆರೆಹಿಡಿದು ಶಾಸ್ತಿ ಮಾಡಿದ ಬಳಿಕ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಕೊಡಕ್ಕಾಡ್ ವೆಳ್ಳಚ್ಚೇರಿ ಹೌಸ್‌ನ ಖಾಲಿದ್ ಮುಸ್ಲಿಯಾರ್ (59) ಎಂಬಾತನನ್ನು ಪೊಲೀಸರಿಗೆ ಹಸ್ತಾಂತರಿಸಲಾಗಿದೆ. ಈತನನ್ನು ನೀಲೇಶ್ವರ ಎಸ್‌ಐ ಜಿಷ್ಣು ಪೋಕ್ಸೋ ಪ್ರಕಾರ ಬಂಧಿಸಿದ್ದಾರೆ. ಕಳೆದ ದಿನ ನೀಲೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಮಸೀದಿಯ ಹಣ ಸಂಗ್ರಹಕ್ಕೆಂದು ತಿಳಿಸಿ ಖಾಲಿದ್ ಮುಸ್ಲಿಯಾರ್ ಒಂದು ಮನೆಗೆ ತಲುಪಿದ್ದನು. ಈಸಂದರ್ಭದಲ್ಲಿ ತಾಯಿ ಮನೆಯಲ್ಲಿಲ್ಲವೆಂದೂ, ತಾನು ಮಾತ್ರ ಇರುವುದಾಗಿಯೂ ಕೈಯಲ್ಲಿ ಹಯಣ ವಿಲ್ಲವೆಂದು ಬಾಲಕಿ ತಿಳಿಸಿದ್ದಳು. ಈ ವೇಳೆ ಬಾಲಕಿಯನ್ನು ಆರೋಪಿ ಬಿಗಿದಪ್ಪಿಕೊಂಡಿರುವುದಾಗಿ ಹೇಳಲಾಗುತ್ತಿದೆ. ಈ ವೇಳೆ ಬಾಲಕಿ ಯ ಬೊಬ್ಬೆ ಕೇಳಿ ತಲುಪಿದ ಸ್ಥಳೀಯರು ಆರೋಪಿಯನ್ನು ಸೆರೆ ಹಿಡಿದು ಶಾಸ್ತಿ ಮಾಡಿದ ಬಳಿಕ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಪೊಲೀಸರು ತಲುಪಿ ಆರೋಪಿಯನ್ನು ಕಸ್ಟಡಿಗೆ ತೆಗೆದು ಠಾಣೆಗೆ ಕೊಂಡೊಯ್ದರು. ಬಾಲಕಿಯ ಮನೆಯ ವರು ದೂರು ನೀಡಿದ ಹಿನ್ನೆಲೆಯಲ್ಲಿ ಆರೋಪಿಯ ಬಂಧನ ದಾಖಲಿಸಲಾಗಿದೆ.
