ಉಪ್ಪಳ: ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ತೆರಳುವ ಸಂದರ್ಭದಲ್ಲಿ ದಾರಿ ಮಧ್ಯೆ ಕುಸಿದು ಬಿದ್ದ ವ್ಯಕ್ತಿಯೋರ್ವರು ನಿಧನ ಹೊಂದಿದ್ದಾರೆ. ಉಪ್ಪಳ ಬಳಿಯ ಹನುಮಾನ್ ನಗರದ ಕೆ.ಕೆ ಸದನ್‌ನ ಪುರುಷೋತ್ತಮ.ಕೆ ಐಲ್ (68) ಎಂಬವರು ನಿಧನ ಹೊಂದಿದವರು. ಭಾನುವಾರ ರಾತ್ರಿ ಸ್ಥಳೀಯ ಹನುಮಾನ್ ಟೈಗರ್ಸ್ ನೆÃತೃತ್ವದಲ್ಲಿ ಊದು ಪೂಜೆ ಸಮೀಪದ ಶ್ರೀ ಅಯ್ಯಪ್ಪ ಮಂದಿರ ಪರಿಸರದಲ್ಲಿ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಮನೆಯಿಂದ ನಡೆದು ಹೋಗುತ್ತಿರುವ ವೇಳೆ ದಾರಿ ಮಧ್ಯೆ ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸುವ ಮಧ್ಯೆ ನಿಧನ ಸಂಭವಿಸಿದೆ. ಇವರು ಬೆಂಗಳೂರಿನಲ್ಲಿ ಖಾಸಗಿ ಕಂಪೆನಿಯೊAದರಲ್ಲಿ ಉದ್ಯೋಗಿಯಾಗಿದ್ದು ನಿವೃತ್ತಿ ಹೊಂದಿದ್ದರು. ದಿ| ಕೊರಗಪ್ಪ -ದಿ| ಮಾಧವಿ ದಂಪತಿ ಪುತ್ರನಾಗಿದ್ದಾರೆ. ಮೃತರು ಪತ್ನಿ ಶಾಂತ, ಪುತ್ರಿ ಸುಷ್ಮ, ಅಳಿಯ ದಿವೇಶ್, ಸಹೋದರ ಸಹೋದರಿಯರಾದ ದಾಮೋದರ.ಕೆ ಐಲ್, ಅಶೋಕ.ಕೆ ಐಲ್, ಶ್ರೀಮತಿ, ರೇವತಿ, ಕವಿತ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
