ಕಾಸರಗೋಡು: ಸ್ಕೂಟರ್‌ನ ಹಿಂಬದಿಗೆ ಕೆಎಸ್‌ಆರ್‌ಟಿಸಿ ಬಸ್ ಢಿಕ್ಕಿ ಹೊಡೆದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ನಡೆದಿದೆ. ಕಳನಾಡು ರೈಲ್ವೇ ನಿಲ್ದಾಣ ಸಮೀಪದ ಪಯೋಟ ಹೌಸ್‌ನ ಮುಹಮ್ಮದ್ ಅಶ್ರಫ್ ಪಯೋಟ (64) ಮೃತಪಟ್ಟ ವ್ಯಕ್ತಿ. ಇಂದು ಬೆಳಿಗ್ಗೆ 8ಗಂಟೆ ವೇಳೆ ಕೆಎಸ್‌ಟಿಪಿ ರಸ್ತೆಯ ಕಳನಾಡಿನಲ್ಲಿ ಅಪಘಾತ ಉಂಟಾಗಿದೆ. ಮುಹಮ್ಮದ್ ಅಶ್ರಫ್ ಉದುಮ ಭಾಗಕ್ಕೆ ಸ್ಕೂಟರ್‌ನಲ್ಲಿ ತೆರಳುತ್ತಿದ್ದರು. ಕಳನಾಡಿಗೆ ತಲುಪಿದಾಗ ಬಂದ ಕೆಎಸ್‌ಆರ್‌ಟಿಸಿ ಬಸ್ ಸ್ಕೂಟರ್‌ಗೆ ಢಿಕ್ಕಿ ಹೊಡೆದಿದೆ. ಗಂಭೀರ ಗಾಯಗೊಂಡ ಮುಹಮ್ಮದ್ ಅಶ್ರಫ್‌ರನ್ನು ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. ಗಲ್ಫ್ ಉದ್ಯೋಗಿಯಾಗಿದ್ದ ಮುಹಮ್ಮದ್ ಅಶ್ರಫ್ ಕೆಲವು ವರ್ಷಗಳ ಹಿಂದೆ ಊರಿಗೆ ಬಂದಿದ್ದರು.
ಮೃತರು ಪತ್ನಿ ದೈನಬಿ, ಮಕ್ಕಳಾದ ಮನ್ಸೂರ್, ಮೈನಾಸ್, ಸೊಸೆ ಯಂದಿರಾದ ರೋಸಾನಾ, ಪರ್ಸೀನಾ, ಸಹೋದರ-ಸಹೋದರಿಯರಾದ ಅಬ್ದುಲ್ ರಹಿಮಾನ್, ಹಮೀದ್, ರಸಿಯಾ, ಜಮೀಲ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.