ವ್ಯಕ್ತಿ ಸಮುದ್ರ ಕಿನಾರೆಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ

ಕುಂಬಳೆ: ಮುಟ್ಟಂ ಬೇರಿಕೆ ಕಡಪ್ಪುರದಲ್ಲಿ ವ್ಯಕ್ತಿಯೊಬ್ಬರು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.  ಮಂಡೆಕಾಪು ಕುಡಾಲುಮೇರ್ಕಳದ ದಿ| ಮದನ ಮೂಲ್ಯ-ಕಮಲ ದಂಪತಿಯ ಪುತ್ರ ಎನ್. ಗೋಪಾಲ ಯಾನೆ ದೇವು (47) ಮೃತಪಟ್ಟ ವ್ಯಕ್ತಿ. ಶನಿವಾರ ಮಧ್ಯಾಹ್ನ ಇವರ ಮೃತದೇಹ ಕಡಪ್ಪುರದಲ್ಲಿ ಕಂಡುಬಂದಿತ್ತು. ಕೂಲಿ ಕಾರ್ಮಿಕನಾದ ದೇವು ಕಳೆದ 15 ವರ್ಷಗಳಿಂದ ಬಂದ್ಯೋಡಿನ ಬಾಡಿಗೆ ಕ್ವಾರ್ಟರ್ಸ್‌ನಲ್ಲಿ ಏಕಾಂಗಿಯಾಗಿ ವಾಸಿಸುತ್ತಿದ್ದರು. ಮೃತರು ಸಹೋದರ-ಸಹೋದರಿಯರಾದ ಸುಂದರ, ಸಂಜೀವ, ಗಿರಿಜ, ದೇವಕಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

You cannot copy contents of this page