ಮುಳ್ಳೇರಿಯ: ವ್ಯಕ್ತಿಯೊಬ್ಬರು ಮನೆಯೊಳಗೆ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಕೂಡಲೇ ಆಸ್ಪತ್ರೆಗೆ ತಲುಪಿಸುತ್ತಿದ್ದಂತೆ ಮೃತಪಟ್ಟ ಘಟನೆ ನಡೆದಿದೆ. ಗಾಡಿಗುಡ್ಡೆ ಬಳಿಯ ತಲೆಬೈಲು ನಿವಾಸಿ ರೋಬರ್ಟ್ ಕ್ರಾಸ್ತ (50) ಮೃತಪಟ್ಟ ವ್ಯಕ್ತಿ. ಕೂಲಿ ಕಾರ್ಮಿಕನಾಗಿದ್ದ ಇವರು ಅವಿವಾಹಿತನಾಗಿದ್ದು, ಮನೆಯಲ್ಲಿ ಏಕಾಂಗಿಯಾಗಿ ವಾಸಿಸುತ್ತಿದ್ದರು. ಇಂದು ಬೆಳಿಗ್ಗೆ ಇವರು ಹೊರಗೆಲ್ಲೂ ಕಾಣಿಸದ ಹಿನ್ನೆಲೆಯಲ್ಲಿ ಸಂಬಂಧಿಕರು ತೆರಳಿ ನೋಡಿದಾಗ ಮನೆಯೊಳಗೆ ಫ್ಯಾನ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ರೋಬರ್ಟ್ ಕ್ರಾಸ್ತ ಕಂಡುಬಂದಿ ದ್ದಾರೆ. ಕೂಡಲೇ ಅವರನ್ನು ಕೆಳಗಿಳಿಸಿ ಮುಳ್ಳೇರಿಯದ ಆಸ್ಪತ್ರೆಗೆ ಕೊಂಡೊ ಯ್ಯುತ್ತಿದ್ದಂತೆ ಮೃತಪಟ್ಟಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಾಸರಗೋಡು ಜನರಲ್ ಆಸ್ಪತ್ರೆಗೆ ತಲುಪಿಸಲಾಗಿದೆ. ಘಟನೆಗೆ ಬಗ್ಗೆ ಬದಿಯಡ್ಕ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
ದಿವಂಗತರಾದ ಕರ್ನಲ್ ಕ್ರಾಸ್ತ-ಅಂಜಲಿನ ಕ್ರಾಸ್ತ ದಂಪತಿಯ ಪುತ್ರನಾದ ಮೃತರು ಸಹೋದರ-ಸಹೋದರಿಯರಾದ ಬರ್ನಾರ್ಡ್ ಕ್ರಾಸ್ತ, ಹೆರಿ ಕ್ರಾಸ್ತ, ಕರ್ಮಿನ ಕ್ರಾಸ್ತ, ಹೆಲೆನ್ ಕ್ರಾಸ್ತ, ಪೌಲಿನ್ ಕ್ರಾಸ್ತ, ಫ್ಲೋರಿನ್ ಕ್ರಾಸ್ತ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.






