ಕಾಸರಗೋಡು: ಕೆಲಸಕ್ಕೆಂದು ತೆರಳಿದ್ದ ವ್ಯಕ್ತಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಇಡಯಿಲಕ್ಕಾಡ್ ಎಕೆಜಿ ಜಂಕ್ಷನ್ ಬಳಿಯ ನಿವಾಸಿ ಒ. ಪವಿತ್ರ (54) ಮೃತಪಟ್ಟವರು. ನಿನ್ನೆ ಸಂಜೆ ಆಯಿತ್ತಿ ವಯೋಜನ ಮಂದಿರದ ಬಳಿ ಉಪ್ಪಟ್ಟಿಕಂಡ ಲ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಹಚ್ಚಲಾಗಿದೆ. ಕೆಲಸಕ್ಕೆ ತೆರಳುವುದಾಗಿ ತಿಳಿಸಿ ಮನೆಯಿಂದ ಇವರು ಹೊರ ಹೋಗಿದ್ದರು. ರಾತ್ರಿಯಾದರೂ ಹಿಂತಿರುಗದ ಹಿನ್ನೆಲೆಯಲ್ಲಿ ಹುಡುಕಾಡಿ ಬಳಿಕ ಪೊಲೀಸರಿಗೆ ಪುತ್ರ ದೂರು ನೀಡಿದ್ದರು. ನಿನ್ನೆ ಬೆಳಿಗ್ಗೆ ಮೃತದೇಹ ಪತ್ತೆಯಾಗಿದೆ.
ಮೃತರು ಪತ್ನಿ ಸವಿತಾ, ಮಕ್ಕಳಾದ ಅಖಿತ,ಅವಿನಾಶ್, ಸಹೋದರರಾದ ವೇಣು, ಸತ್ಯನ್, ರಘು, ಸಹೋದರಿ ಶ್ರೀದೇವಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.