ಕುಂಬಳೆ ಪೇಟೆಯಲ್ಲಿ ಅಸ್ವಸ್ಥ ಸ್ಥಿತಿಯಲ್ಲಿ ಪತ್ತೆಯಾದ ವ್ಯಕ್ತಿ ಸಾಮಾಜಿಕ ಕಾರ್ಯಕರ್ತನ ನೇತೃತ್ವದಲ್ಲಿ ಪರಿಯಾರಂ ಆಸ್ಪತ್ರೆಯಲ್ಲಿ ದಾಖಲು

ಕಾಸರಗೋಡು: ಎದ್ದು ನಡೆದಾಡಲು, ಮಾತನಾಡಲು ಸಾಧ್ಯವಾಗದೆ   ಕುಂಬಳೆಯ ಅಂಗಡಿ ವರಾಂಡದಲ್ಲಿ ಕಂಡುಬಂದ  ವ್ಯಕ್ತಿಯನ್ನು ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ದಾಖಲಿಸಲಾಯಿತು. ಅಬ್ದುಲ್ಲ ಚೌಕಿ ಎಂಬ ಹೆಸರಲ್ಲಿ ಕುಂಬಳೆಯಲ್ಲಿ ಪರಿಚಿತನಾಗಿರುವ ವ್ಯಕ್ತಿಯನ್ನು ಸಾಮಾಜಿಕ ಕಾರ್ಯಕರ್ತ ಇರ್ಷಾದ್ ಚಾಕೋ, ಆರಿಫ್ ಕಡವತ್ ಎಂಬಿವರ ನೇತೃತ್ವದಲ್ಲಿ  ಪರಿಯಾರಂನ ಆಸ್ಪತ್ರೆಗೆ ತಲುಪಿಸ ಲಾಗಿದೆ. ಈ ಹಿಂದೆ ಕುಂಬಳೆಯ ಹೋಟೆಲೊಂದರಲ್ಲಿ ಈ ವ್ಯಕ್ತಿ ಕೆಲಸಕ್ಕಿದ್ದರು. ಆ ಸಂದರ್ಭದಲ್ಲಿ ತನ್ನ ಹೆಸರು ಅಬ್ದುಲ್ಲ, ಊರು ಚೌಕಿಯೆಂದು ತಿಳಿಸಿದ್ದರು.  ಅದಲ್ಲದೆ ಈ ವ್ಯಕ್ತಿಯ ಹೆಚ್ಚಿನ ಮಾಹಿತಿ ನಾಗರಿಕರಿಗೆ ತಿಳಿದಿಲ್ಲ. ವೃದ್ಧಾಪ್ಯದಿಂ ದಾಗಿ ಹೋಟೆಲ್ ಕೆಲಸ ಉಪೇಕ್ಷಿ ಸಿದ ಇವರು ಬಳಿಕ ಅಂಗಡಿಗಳ ವರಾಂಡದಲ್ಲೇ ಕಾಲ ಕಳೆಯುತ್ತಿದ್ದರು.  ಯಾರಾದರೂ ನೀಡುವ ಸಹಾಯ ದಿಂದ ಇವರು ಹಸಿವು ನೀಗಿಸುತ್ತಿದ್ದರು. ಮೊನ್ನೆ ಅಂಗಡಿ ವರಾಂಡದಲ್ಲಿ ತೀವ್ರ ಅಸ್ವಸ್ಥಗೊಂಡ ಸ್ಥಿತಿಯಲ್ಲಿ ಇವರು ಪತ್ತೆಯಾದ ಬಗ್ಗೆ ಮಾಹಿತಿ ಲಭಿಸಿದ ಇರ್ಷಾದ್ ಚಾಕೋ ಹಾಗೂ ಆರಿಫ್ ಸೇರಿ ಆಸ್ಪತ್ರೆಗೆ ತಲುಪಿಸಿದ್ದಾರೆ. ಇದೇ ವೇಳೆ ಶುಕ್ರವಾರ ರಾತ್ರಿ 7.30ರ ವೇಳೆ ಒಂದು ವಾಹನ ಅಬ್ದುಲ್ಲರಿಗೆ ಢಿಕ್ಕಿ ಹೊಡೆದಿರುವುದಾಗಿ ಹೇಳಲಾಗುತ್ತಿದೆ. ಈ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ.

RELATED NEWS

You cannot copy contents of this page