ಒಂದುವಾರ ಹಿಂದೆ ಮನೆಯಿಂದ ಹೋದ ವ್ಯಕ್ತಿ ನಾಪತ್ತೆ

ಉಪ್ಪಳ: ಒಂದು ವಾರದ ಹಿಂದೆ ಮನೆಯಿಂದ ತೆರಳಿದ ವ್ಯಕ್ತಿ ನಾಪತ್ತೆಯಾದ ಬಗ್ಗೆ ದೂರಲಾಗಿದೆ. ವರ್ಕಾಡಿ ದೇವಂದಪಡ್ಪು ನಿವಾಸಿ ಕಿಶನ್ ಕುಮಾರ್ ಶೆಟ್ಟಿ (32) ನಾಪತ್ತೆಯಾದ ವ್ಯಕ್ತಿ. ಇವರು ದೇವಂದಪಡ್ಪಿನಲ್ಲಿ  ಕೆಂಪು ಕಲ್ಲು ಕ್ವಾರೆಯ ರೈಟರ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಈ ತಿಂಗಳ 16ರಂದು ಮಧ್ಯಾಹ್ನ 2 ಗಂಟೆಗೆ ಮನೆಯಿಂದ ಹೊರಗೆ ತೆರಳಿದ್ದ್ದಾರೆನ್ನ ಲಾಗಿದೆ. ಅನಂತರ ಮರಳಿ ಬಂದಿಲ್ಲ. ವಿವಿಧೆಡೆ ಹುಡುಕಾಡಿದರೂ ಪತ್ತೆಹಚ್ಚಲಾಗಿಲ್ಲ.  ಅಲ್ಲದೆ ಕಿಶನ್ ಕುಮಾರ್‌ರ ಮೊಬೈಲ್ ಫೋನ್‌ಗೆ ಕರೆ ಮಾಡಿದಾಗ ಅದು ಸ್ವಿಚ್‌ಆಫ್ ಆಗಿರುವುದಾಗಿ ತಿಳಿದುಬರುತ್ತದೆ. ಈ ಹಿನ್ನೆಲೆಯಲ್ಲಿ ತಂದೆ  ಐತ್ತಪ್ಪ ಶೆಟ್ಟಿ ನಿನ್ನೆ ಮಂಜೇಶ್ವರ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

You cannot copy contents of this page