ಕುಂಬಳೆ: ಕುಂಬಳೆ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿನ್ನೆ ಬೆಳಿಗ್ಗೆ ಕಾರು ಢಿಕ್ಕಿ ಹೊಡೆದು ಮಧ್ಯವಯಸ್ಕ ಮೃತಪಟ್ಟ ಘಟನೆ ನಡೆದಿದೆ.
ತಮಿಳುನಾಡು ಉಲುಂದುಲ್ ಪೇಟೆ ವಿಲ್ಲುಪುರಂನ ವೇಲಾಯುಧಂ (56) ಮೃತಪಟ್ಟ ವ್ಯಕ್ತಿ. ನಿನ್ನೆ ಬೆಳಿಗ್ಗೆ 7.45ರ ವೇಳೆ ಕಾಸರಗೋಡು ಭಾಗ ದಿಂದ ಮಂಗಳೂರಿನತ್ತ ತೆರಳುತ್ತಿದ್ದ ಕಾರು ಢಿಕ್ಕಿ ಹೊಡೆದಿದೆ. ನಿಯಂತ್ರಣ ತಪ್ಪಿದ ಕಾರು ರಾಷ್ಟ್ರೀಯ ಹೆದ್ದಾರಿ ಬದಿ ನಿಂತಿದ್ದ ವೇಲಾಯು ಧಂರಿಗೆ ಢಿಕ್ಕಿ ಹೊಡೆದಿದೆಯೆಂದು ಪೊಲೀಸರು ತಿಳಿಸಿದ್ದಾರೆ. ಢಿಕ್ಕಿಯ ಆಘಾತದಿಂದ ಸರ್ವೀಸ್ ರಸ್ತೆಗೆಸೆ ಯಲ್ಪಟ್ಟು ಗಂಭೀರ ಗಾಯಗೊಂಡ ವೇಲಾಯುಧಂರನ್ನು ಕೂಡಲೇ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. ಕಾಞಂಗಾಡ್ನ ಕ್ವಾರ್ಟರ್ಸ್ನಲ್ಲಿ ವಾಸಿಸುತ್ತಿದ್ದ ಇವರು ಮೀನುಗಾರಿಕೆಗೆ ತೆರಳುವವರೊಂದಿಗೆ ಹೋಗುತ್ತಿದ್ದರೆನ್ನಲಾಗಿದೆ. ಇದೇ ಕೆಲಸದ ಸಂಬಂಧ ಇವರು ನಿನ್ನೆ ಬೆಳಿಗ್ಗೆ ಕುಂಬಳೆಗೆ ತಲುಪಿದ್ದರೆಂದು ಹೇಳಲಾಗು ತ್ತಿದೆ. ಘಟನೆ ಅರಿತು ವೇಲಾಯುಧಂರ ಸಂಬಂಧಿಕರು ಕುಂಬಳೆಗೆ ಆಗಮಿಸಿ ದ್ದಾರೆ. ಮೃತದೇಹವನ್ನು ಇಂದು ಕಾಸರಗೋಡು ಜನರಲ್ ಆಸ್ಪತ್ರೆ ಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಊರಿಗೆ ಕೊಂಡೊಯ್ಯಲಾಗು ವುದೆಂದು ಸಂಬಂಧಿಕರು ತಿಳಿಸಿದ್ದಾರೆ.
ದಿವಂಗತರಾದ ಮಾರ್ಕಂ ಡನ್-ನಲ್ಲತ್ತಾಳ್ ದಂಪತಿಯ ಪುತ್ರನಾದ ಮೃತರು ಸಹೋದರ-ಸಹೋದರಿ ಯರಾದ ಏಳುಮಲೈ, ಸಂಧ್ಯ, ಪೊನ್ನನ್, ಕೋದಾಂಬರಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.