ಕಾಸರಗೋಡು: ರೈಲಿನಿಂದಿಳಿದು ಸುಲಭದಲ್ಲಿ ಫ್ಲಾಟ್ ಫಾಂಗೆ ಹತ್ತಲು ಹಳಿ ದಾಟುತ್ತಿದ್ದಾಗ ಬಂದ ಗೂಡ್ಸ್ ರೈಲು ಢಿಕ್ಕಿ ಹೊಡೆದು ಯುವಕ ಮೃತಪಟ್ಟ ಘಟನೆ ಸಂಭವಿಸಿದೆ.
ನಿನ್ನೆ ಮಧ್ಯಾಹ್ನ ಕಾಸರಗೋಡು ರೈಲ್ವೇ ನಿಲ್ದಾಣದಲ್ಲಿ ಈ ದುರ್ಘಟನೆ ಉಂಟಾಗಿದೆ. ಮೃತಪಟ್ಟ ವ್ಯಕ್ತಿ ಕರ್ನಾಟಕದ ಕೊಡಗು ನಿವಾಸಿ ರಾಜೇಶ್ (35) ಎಂಬವರೆಂದು ಗುರುತಿಸಲಾಗಿದೆ. ಮೃತ ವ್ಯಕ್ತಿ ಧರಿಸಿದ್ದ ಅಂಗಿಯ ಜೇಬಿನಲ್ಲಿ ಲಭಿ ಸಿದ ಆಧಾರ್ ಕಾರ್ಡ್‌ನ ವಿಳಾಸ ದಿಂದ ವ್ಯಕ್ತಿಯ ಗುರುತು ಹಚ್ಚಲಾ ಗಿದೆ. ಆಧಾರ್ ಕಾರ್ಡ್‌ನಲ್ಲಿ ವ್ಯಕ್ತಿ ಯ ತಂದೆ ಕರ್ನಾಟಕದ ಕೊಡಗು ಗೋಣಿಮಾ ಗೂರು ಸೋಮವಾರ ಪುರದ ಚೆನ್ನಯ್ಯ ಬಾಣವಾರ ಎಂದು ದಾಖಲಿಸ ಲಾಗಿದೆ. ರೈಲು ಢಿಕ್ಕಿ ಹೊಡೆದು ದರಿಂದ ರಾಜೇಶರ ಕಾಲು ತುಂಡರಿ ಸಲ್ಪಟ್ಟು ರೈಲಿನಲ್ಲೇ ಸಿಲುಕಿಕೊಂಡಿತ್ತು. ಇದರಿಂದ ಗೂಡ್ಸ್ ರೈಲನ್ನು ಕುಂಬಳೆ ಯಲ್ಲಿ ನಿಲ್ಲಿಸಿ ಪರಿಶೀಲಿಸಿದಾಗ ರೈಲಿನಲ್ಲಿ ಸಿಲುಕಿಕೊಂಡಿದ್ದ ಕಾಲು ಪತ್ತೆಯಾಗಿದೆ. ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಗೆ ತಲುಪಿಸಲಾಯಿತು.







