ನಡೆದು ಹೋಗುತ್ತಿದ್ದ ವ್ಯಕ್ತಿ ಕುಸಿದು ಬಿದ್ದು ಮೃತ್ಯು

ಕುಂಬಳೆ: ಕುಂಬಳೆ ಪೇಟೆಯಲ್ಲಿ ನಡೆದು ಹೋಗುತ್ತಿದ್ದ ವ್ಯಕ್ತಿ ಕುಸಿದು ಬಿದ್ದು ಮೃತಪಟ್ಟ ಘಟನೆ ನಡೆದಿದೆ.  ಮಾಟೆಂಗುಳಿ ನಿವಾಸಿಯೂ ಆರಿ ಕ್ಕಾಡಿ ತಂಙಳ್‌ರ ಮನೆ  ಸಮೀಪ ವಾಸಿಸುವ ಕೆ.ಎಂ. ಅಬ್ಬಾಸ್ (55) ಮೃತಪಟ್ಟ ವ್ಯಕ್ತಿ. ನಿನ್ನೆ ಮಧ್ಯಾಹ್ನ ಕುಂಬಳೆ ಪೇಟೆಯಲ್ಲಿ ಸ್ನೇಹಿತ ನೊಂದಿಗೆ ಮಾತನಾಡುತ್ತಿದ್ದಾಗ ಇವ ರಿಗೆ ಎದೆ ನೋವು ಉಂಟಾಗಿತ್ತೆನ್ನ ಲಾಗಿದೆ. ಈ ಬಗ್ಗೆ  ಸ್ನೇಹಿತನಿಗೆ ತಿಳಿಸಿ ಆಸ್ಪತ್ರೆಗೆ ನಡೆದು ಹೋಗುತ್ತಿ ದ್ದಾಗ ರಸ್ತೆ ಬದಿ ಕುಸಿದು ಬಿದ್ದಿದ್ದಾರೆ. ಕೂಡಲೇ ನಾಗರಿಕರು ಜಿಲ್ಲಾ ಸಹಕಾರಿ ಆಸ್ಪತ್ರೆಗೆ ತಲುಪಿಸಿದರೂ ಅಷ್ಟರೊಳಗೆ ನಿಧನ ಸಂಭವಿಸಿತ್ತು. ಗಲ್ಫ್ ಉದ್ಯೋಗಿಯಾದ ಅಬ್ಬಾಸ್ ಕಳೆದ ತಿಂಗಳು ಊರಿಗೆ ಬಂದಿದ್ದರು.

ಮೃತರು ಪತ್ನಿ ಸಕೀನ, ಮಕ್ಕಳಾದ ಅಜ್ಮಲ್ (ದುಬೈ), ಬಿಲಾಲ್ (ಬಹರೈನ್), ಸೆಮೀಮ, ಸಾಬಿರ,ಸನ, ಸಫ, ಸಹೋದರ-ಸಹೋದರಿಯರಾದ ಮುಹಮ್ಮದ್, ಅಬ್ದುಲ್ಲ, ಅಲಿ, ಸೈನಬ, ಸಫಿಯ, ಆಯಿಷ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಇನ್ನೋರ್ವ ಸಹೋದರ ಇಸ್ಮಾಯಿಲ್ ಈ ಹಿಂದೆ ನಿಧನರಾಗಿದ್ದಾರೆ.

RELATED NEWS

You cannot copy contents of this page