ಮಂಜೇಶ್ವರ: ಮಂಜೇಶ್ವರ ಬ್ಲೋಕ್ ಪಂಚಾಯತ್‌ನ ವಾಹನ ಮಂಜೇಶ್ವರ- ಮಂಗಳೂರು ಮಧ್ಯೆ ಸರ್ವೀಸ್ ನಡೆಸುತ್ತಿದೆ ಎಂದು ಹೊಸಂಗಡಿ ಗೌಸಿಯಾ ನಗರದ ಎನ್. ಅಬ್ದುಲ್ ಹಮೀದ್ ವಿಜಿಲೆನ್ಸ್ ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ. ಕೆಎಲ್14ಎಲ್ 9926 ನಂಬ್ರದ ಸರಕಾರಿ ವಾಹನವನ್ನು ಈ ರೀತಿಯಲ್ಲಿ ಸರ್ವೀಸ್‌ಗೆ ಬಳಸಿಕೊಳ್ಳುತ್ತಿರುವುದಾಗಿ ದೂರಲಾಗಿದೆ. ಈ ವಾಹನಕ್ಕೆ ಬೆಂಗಾವ ಲಾಗಿ ಮಂಜೇಶ್ವರ ಗ್ರಾಮ ಪಂಚಾಯತ್ ವಾಹನವೂ ಸಂಚರಿಸುತ್ತಿರುವುದಾಗಿ ಆರೋಪಿಸಲಾಗಿದೆ.
ಈ ವಾಹನಗಳು ಮಂಗಳೂರಿನಲ್ಲಿ ನಡೆಯುವ ವಿವಾಹ ಕಾರ್ಯಕ್ರಮ ಸ್ಥಳಗಳಲ್ಲಿ, ಊರಿನ ರಾಜಕೀಯ ಪಕ್ಷಗಳ ಸಭೆ ನಡೆಯುವಲ್ಲಿ, ಕೆಲವು ಖಾಸಗಿ ವ್ಯಕ್ತಿಗಳ ಮನೆಗಳ ಬಳಿ, ಶಾಲೆ ಪರಿಸರಗಳಲ್ಲಿ ಸಾಮಾನ್ಯವಾಗಿ ಕಂಡು ಬರುತ್ತಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಕಳೆದ ಡಿಸೆಂಬರ್ 27 ಹಾಗೂ 28ರಂದು ಈ ವಾಹನ ತಲಪಾಡಿ ಟೋಲ್ ಬೂತ್ ದಾಟಿ ಸಂಚರಿಸಿದೆ. ಡಿಸೆಂಬರ್ 28ರಂದು ರಾತ್ರಿ 9.30ಕ್ಕೆ ಇದು ಟೋಲ್‌ಬೂತ್ ದಾಟಿ ಹೋಗಿರುವುದಾಗಿಯೂ ಮಂಜೇಶ್ವರ ಬಿ.ಡಿ.ಒ.ರಿಗೆ ಲಿಖಿತವಾಗಿ ತಿಳಿಸಲಾಗಿದೆ ಎಂದು ದೂರಿನಲ್ಲಿ ಹೇಳಲಾಗಿದೆ.







