ರಾಹುಲ್ ಗಾಂಧಿ ಹೋರಾಟಕ್ಕೆ ಮಂಜೇಶ್ವರ ಕಾಂಗ್ರೆಸ್ ಬೆಂಬಲ

ಮಂಜೇಶ್ವರ: ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ರಾಷ್ಟ್ರವ್ಯಾಪಿ ನಡೆಸುತ್ತಿರುವ ಮತಕಳ್ಳತನ ಆರೋಪ ಹೋರಾಟಕ್ಕೆ ಬೆಂಬಲ ಸೂಚಕವಾಗಿ  ನಡೆಸಲಾಗುವ ಸಹಿ ಸಂಗ್ರಹ ಅಭಿಯಾನದ ಮಂಜೇಶರ ಬ್ಲಾಕ್ ಮಟ್ಟದ ಉದ್ಘಾಟನೆ ಕಾಂಗ್ರೆಸ್ ಜಿಲ್ಲಾ ಸಮಿತಿ ಅಧ್ಯಕ್ಷ ಪಿ.ಕೆ. ಫೈಸಲ್ ಉದ್ಘಾಟಿಸಿದರು.  ಹೊಸಂಗಡಿ ಜಂಕ್ಷನ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಂಜೇಶ್ವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುಹಮ್ಮದ್ ಡಿಎಂಕೆ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಾಂಗ್ರೆಸ್ ನಾಯಕರಾದ ಹಕೀಂ ಕುನ್ನಿಲ್, ರಮೇಶನ್ ಕರುವಾಚ್ಚೇರಿ, ಎಂ.ಸಿ. ಪ್ರಭಾಕರನ್, ಶಾಹುಲ್ ಹಮೀದ್ ಪೆರ್ಲ ಮಾತನಾಡಿದರು. ನೇತಾರರಾದ ಉಮ್ಮರ್ ಬೋರ್ಕಳ, ಹರ್ಷಾದ್ ವರ್ಕಾಡಿ, ಚಂದ್ರಶೇಖರ ಶೆಟ್ಟಿ ಬೆಜ್ಜ, ಇಕ್ಭಾಲ್ ಕಳಿಯೂರು, ಅಹ್ಮದ್ ಮನ್ಸೂರ್, ಫ್ರಾನ್ಸಿಸ್ ಡಿ’ಸೋಜಾ, ನಾಗೇಶ್ ಮಂಜೇಶ್ವರ, ಫಾರೂಕ್ ಶಿರಿಯ, ಸತ್ಯನ್ ಸಿ ಉಪ್ಪಳ, ಗಣೇಶ್ ಪಾವೂರು, ಕರೀಂ ಪೂನಾ, ಹನೀಫ್, ಬಾಬು ಬಂದ್ಯೋಡು, ಪುರುಷೋತ್ತಮ ಅರಿಬೈಲ್, ದಾಮೋದರ, ಗೀತಾ ಬಂದ್ಯೋಡು, ತಾಹಿರಾ ಉಪ್ಪಳ, ಪ್ರಶಾಂತಿ ಮಂಜೇಶ್ವರ, ಜೆಸ್ಸಿ ಕಣ್ವತೀರ್ಥ, ವಿನೋದ್ ಪಾವೂರು,ನವೀನ್ ಶೆಟ್ಟಿ ಚೆರುಗೋಳಿ, ಸೀತಾ ಡಿ, ಸುಮಯ್ಯಾ ಧರ್ಮನಗರ, ಮೊಹಮ್ಮದ್ ಮಜಾಲ್,ರಾಜೇಶ್ ನಾಯ್ಕ್ ಹೇರೂರು, ಪ್ರದೀಪ್ ಶೆಟ್ಟಿ,ಕೃಷ್ಣನ್ ಅಡ್ಕತ್ತೊಟ್ಟಿ, ವಸಂತರಾಜ್, ಮುಹಮ್ಮದ್ ಜೆ, ಹಮೀದ್ ಕಣಿಯೂರು, ಇರ್ಷಾದ್ ಮಂಜೇಶ್ವರ ವಿಕ್ಟರ್ ಡಿ’ಸೋಜಾ, ಎಲಿಯಾಸ್ ಡಿ ಸೋಜಾ, ಮಾಲಿಂಗ ಮಂಜೇಶ್ವರ, ರಂಜಿತ್ ಮಂಜೇಶ್ವರ, ಶೀನ ಕೆದುಂಬಾಡಿ, ಗಂಗಾಧರ ಕೆ ಎಸ್, ಸದಾಶಿವ ಕೆ, ಕೆ.ವಿ. ರಾಮನ್, ಎ.ಎಂ. ಉಮ್ಮರ್, ಮೊಹಮ್ಮದ್ ಸೀಗಂದಡಿ, ಗಣೇಶ್ ಶೆಟ್ಟಿಗಾರ್ ಉಪಸ್ಥಿತರಿದ್ದರು. ದಿವಾಕರ ಎಸ್.ಜೆ. ಸ್ವಾಗತಿಸಿ, ಖಲೀಲ್ ಬಜಾಲ್ ವಂದಿಸಿದರು.

You cannot copy contents of this page