ಮಂಜೇಶ್ವರ, ಕಾಸರಗೋಡು, ಕಾರಡ್ಕ ಬ್ಲೋಕ್ ಸ್ಥಾಯೀ ಸಮಿತಿ ಸದಸ್ಯರ, ಜಿ.ಪಂ. ಮಹಿಳಾ ಸ್ಥಾಯೀ ಸಮಿತಿ ಸದಸ್ಯೆಯರ ಆಯ್ಕೆ

ಮಂಜೇಶ್ವರ: ಬ್ಲೋಕ್ ಪಂಚಾ ಯತ್ ಸ್ಥಾಯೀ ಸಮಿತಿ ಸದಸ್ಯರ ಆಯ್ಕೆ ಬ್ಲೋಕ್ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.  13 ನಾಮನಿರ್ದೇಶ ಪತ್ರಿಕೆಗಳು ಲಭಿಸಿದ ಹಿನ್ನೆಲೆಯಲ್ಲಿ  ಅವಿರೋಧವಾಗಿ 13 ಮಂದಿಯ ಸಮಿತಿಯನ್ನು ಆಯ್ಕೆ ಮಾಡಲಾಯಿತು. ಕುಂಜತ್ತೂರು, ಬಂದ್ಯೋಡು, ಚೇವಾರು, ಪಾತೂರು ಡಿವಿಶನ್‌ಗಳಿಂದಿರುವ ಜನಪ್ರತಿನಿಧಿಗಳಾದ ಮುಹಮ್ಮದ್ ಹನೀಫ, ಅಬ್ದುಲ್ ಅಸೀಸ್ ಮರಿಕ್ಕೆ, ಚಂದ್ರಾವತಿ, ಎಸ್.ಎ. ಬೀಪಾತು ಎಂಬಿವರು ಸ್ಥಾಯೀ ಸಮಿತಿ ಸದಸ್ಯರಾ ಗಿಯೂ, ಪುತ್ತಿಗೆ, ಮಜೀರ್ಪಳ್ಳ, ಪೆರ್ಲ ಡಿವಿಶನ್‌ನಿಂದಿರುವ ಜನಪ್ರತಿನಿಧಿ ಗಳಾದ ಮೊಹಮ್ಮದ್ ಜುನೈದ್, ಕೆ. ಮೋಹನ್,ನಫೀಸತ್ ಮಿಸ್ರಿಯ ಎಂಬಿವರು ಆರೋಗ್ಯ ಸ್ಥಾಯೀ ಸಮಿತಿ ಸದಸ್ಯರಾಗಿಯೂ, ಉಪ್ಪಳ, ಎಣ್ಮಕಜೆ, ಮಂಜೇಶ್ವರ ನಯಾಬಜಾರ್ ಎಂಬೀ ಡಿವಿಶನ್‌ಗಳ ಜನಪ್ರತಿನಿಧಿಗಳಾದ ಫಾತಿಮತ್ ಸುಹರಾ, ವಿದ್ಯಾಕುಮಾರಿ, ಎಂ.ನಾಗೇಶ, ಜಮೀಲ ಎಂಬಿವರು ಕ್ಷೇಮಕಾರ್ಯ ಸಮಿತಿ ಸದಸ್ಯ ರಾಗಿಯೂ ಕಡಂಬಾರ್, ಪೆರ್ಮುದೆಯ ಜನಪ್ರತಿನಿಧಿಗಳಾದ ಕೆ. ಮೋಹನ್ ರೈ, ಮೊಹಮ್ಮದ್ ಬಶೀರ್,  ನಾಮಪತ್ರಿಕೆ ಸಲ್ಲಿಸದ ಮುಳಿಗದ್ದೆ ಡಿವಿಶನ್‌ನ ಅಬ್ದುಲ್ ರಜಾಕ್ ಚಿಪ್ಪಾರು ಎಂಬಿ ವರನ್ನು ಹಣಕಾಸು ಸಮಿತಿ ಸದಸ್ಯ ರಾಗಿಯೂ ಆಯ್ಕೆ ಮಾಡಲಾಯಿತು. ಬ್ಲೋಕ್ ಪಂಚಾಯತ್ ಅಧ್ಯಕ್ಷ ಸೈಫುಲ್ಲಾ ತಂಙಳ್, ಸದಸ್ಯರು, ಬ್ಲೋಕ್ ಡೆವಲಪ್‌ಮೆಂಟ್ ಆಫೀಸರ್ ಭಾಗವಹಿಸಿದರು.

ಕಾಸರಗೋಡು ಬ್ಲೋಕ್ ಪಂಚಾಯತ್ ಸ್ಥಾಯಿ ಸಮಿತಿ ಸದಸ್ಯರ ಚುನಾವಣೆ ರಿಟರ್ನಿಂಗ್ ಆಫೀಸರ್ ಬಿನು ಜೋಸೆಫ್‌ರ ನೇತೃತ್ವದಲ್ಲಿ ನಡೆಯಿತು.  ಹಣಕಾಸು ಸ್ಥಾಯೀ ಸಮಿತಿ ಸದಸ್ಯರಾಗಿ ಲೀಲಾ, ಪಿ.ಎಂ. ನಸೀಮ, ಪೃಥ್ವೀರಾಜ್, ಜಗನ್ನಾಥ ಶೆಟ್ಟಿ, ಮಹೇಶ್ ವಳಕ್ಕುಂಜ ಆಯ್ಕೆಯಾದರು. ಅಭಿವೃದ್ಧಿ ಕಾರ್ಯಸಮಿತಿ ಸದಸ್ಯರಾಗಿ ಸಫೀಸ ಹುಸೈನ್, ಅಶ್ರಫ್ ಕಾರ್ಲೆ,  ಸಿ.ವಿ. ಜೇಮ್ಸ್, ಸಕೀನಾ ಅಬ್ದುಲ್ಲ ಹಾಜಿ, ಕ್ಷೇಮ ಕಾರ್ಯಸ್ಥಾಯೀ ಸಮಿತಿ ಅಧ್ಯಕ್ಷರಾಗಿ ಅಸ್ಮೀನ ಅಬೀಬ್ ಚಟ್ಟಂಗುಳಿ, ಖಾದರ್ ಮಾನ್ಯ, ಮರಿಯಾ ಮಾಹಿನ್, ಶಾಹಿದಾ, ಅಫ್ಸಲ್ ಸಿಸ್ಲು, ಆರೋಗ್ಯ ಸ್ಥಾಯೀ ಸಮಿತಿ ಸದಸ್ಯರಾಗಿ ಸೋಯಾ ಲತೀಫ್ ಎರಿಯಾಲ್, ಎಂ.ಎಸ್. ಮೊಯ್ದು ಗೋಳಿಯಡ್ಕ,  ನಾಸಿಫ ಎ.ಕೆ. ಜಲೀಲ್, ಅನ್ವರ್ ಕೋಳಿಯಡ್ಕ ಎಂಬಿವರು ಆಯ್ಕೆಯಾದರು.ಸ್ಥಾಯೀ ಸಮಿತಿ ಅಧ್ಯಕ್ಷರ ಚುನಾವಣೆ ಈ ತಿಂಗಳ ೯ರಂದು ಬೆಳಿಗ್ಗೆ ೧೦ ಗಂಟೆಗೆ ನಡೆಯಲಿದೆ.

ಕಾರಡ್ಕ ಬ್ಲೋಕ್ ಪಂಚಾಯತ್‌ನ ಸ್ಥಾಯಿ ಸಮಿತಿ ಸದಸ್ಯರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಶಾಂತಿನಿದೇವಿ, ಸುಧಾಮ ಗೋಸಾಡ, ಎ.ಪಿ. ನಿಶಾ ಎಂಬಿವರು ಹಣಕಾಸು ಸ್ಥಾಯಿ ಸಮಿತಿ ಸದಸ್ಯರಾಗಿಯೂ, ಜಿ. ರಾಜೇಶ್‌ಬಾಬು, ರೂಪ ಸತ್ಯನ್, ಎಸ್.ಆರ್. ಸತ್ಯಾವತಿ ಎಂಬಿವರು ಅಭಿವೃದ್ಧಿ ಸ್ಥಾಯಿ ಸಮಿತಿ ಸದಸ್ಯರಾಗಿಯೂ, ಗೋಪಾಲ ಜಿ. ಮಯ್ಯಳ, ಜಯಲಕ್ಷ್ಮಿ, ಶಮೀರ್ ಕುಂಬಕ್ಕೋಡು ಎಂಬಿವರನ್ನು ಕ್ಷೇಮ ಕಾರ್ಯ ಸ್ಥಾಯಿ ಸಮಿತಿ ಸದಸ್ಯರಾಗಿಯೂ, ಜಯಾನಂದ ಕುಳ, ಕೆ. ಪ್ರಿಯ, ಕೆ. ಸುಗಂಧಿನಿ ಎಂಬಿವರನ್ನು ಆರೋಗ್ಯ ಸ್ಥಾಯಿ ಸಮಿತಿ ಸದಸ್ಯರಾಗಿಯೂ ಆಯ್ಕೆ ಮಾಡಲಾಗಿದೆ. ಸರ್ವೇ ಡೆಪ್ಯೂಟಿ ಡೈರಕ್ಟರ್ ಎಸ್. ವಿನೋದ್, ಬ್ಲೋಕ್ ಪಂಚಾಯತ್ ಅಧಿಕಾರಿ, ಬ್ಲೋಕ್ ಪಂಚಾಯತ್ ಅಧ್ಯಕ್ಷ, ಸದಸ್ಯರು ಉಪಸ್ಥಿತರಿದ್ದರು.

ಜಿಲ್ಲಾ ಪಂಚಾಯತ್ ಸ್ಥಾಯೀ ಸಮಿತಿಗೆ ಮಹಿಳಾ ಸದಸ್ಯೆಯರನ್ನು ಆಯ್ಕೆ ಮಾಡಲಾಯಿತು. ಹಣಕಾಸು ಸ್ಥಾಯೀ ಸಮಿತಿಗೆ ನಾಮನಿರ್ದೇಶವಿಲ್ಲದ ಕಾರಣ ಇದಕ್ಕಿರುವ ಆಯ್ಕೆಯನ್ನು ನಾಳೆಗೆ ಮುಂದೂಡಲಾಗಿದೆ. ಆರೋಗ್ಯ ಸ್ಥಾಯೀ ಸಮಿತಿಗೆ ಡಾ| ಸೆರಿನಾ ಸಲಾಂ, ಅಭಿವೃದ್ಧಿ ಸ್ಥಾಯೀ ಸಮಿತಿಗೆ ಟಿ. ವಿ. ರಾಧಿಕಾ, ಕ್ಷೇಮ ಸ್ಥಾಯೀ ಸಮಿತಿಗೆ ರೀನಾ ಥೋಮಸ್, ಲೋಕೋ ಪಯೋಗಿ ಸ್ಥಾಯೀ ಸಮಿತಿಗೆ ಒ. ವತ್ಸಲ ಆಯ್ಕೆಯಾದರು.

RELATED NEWS

You cannot copy contents of this page