ಮಂಜೇಶ್ವರ: ನೋವು ಅನುಭವಿಸುವವರಿಗೆ, ಏಕಾಂತವಾ ಗಿರುವವರಿಗೆ ಸ್ನೇಹಸ್ಪರ್ಶ, ಸಂತೃಪ್ತ ಆರೈಕೆ ಎಂಬ ಗುರಿಯೊಂದಿಗೆ ರೋಗಿಗಳನ್ನು ಹಾಗೂ ಶಯ್ಯಾವಲಂ ಬಿಯಾದವರ ಮಾನಸಿಕ ಅಸ್ವಸ್ಥತೆ ಕಡಿಮೆಗೊಳಿಸಲು ಮಂಜೇಶ್ವರ ಪಂಚಾಯತ್ ಬ್ಲೋಕ್ ಫ್ಯಾಮಿಲಿ ಹೆಲ್ತ್ ಸೆಂಟರ್ ಪಾಲಿಯೇಟಿವ್ ಸ್ನೇಹ ಸಂಗಮ ನಡೆಸಿತು. ಪಂಚಾಯತ್ ಅಧ್ಯಕ್ಷೆ ಜೀನ್ ಲವೀನಾ ಮೊಂತೇರೋ ಉದ್ಘಾ ಟಿಸಿದರು. ಉಪಾಧ್ಯಕ್ಷ ಮುಹಮ್ಮದ್ ಸಿದ್ದಿಕ್ ಅಧ್ಯಕ್ಷತೆ ವಹಿಸಿದರು. ಡಾ| ಪ್ರಭಾಕರ ರೈ ಸ್ವಾಗತಿಸಿದರು. ಸ್ಥಾಯೀ ಸಮಿತಿ ಅಧ್ಯಕ್ಷರಾದ ರಾಧಾ, ಯಾದವ ಬಡಾಜೆ, ಮುಮ್ತಾಸ್ ಸಮೀರ, ಪಂಚಾಯತ್ ಕಾರ್ಯದರ್ಶಿ ಸುಮೇಶ್, ಡಾ| ಶಿಮ್ನಾ ಪ್ರತೀಶ್, ಡಾ| ದೀಪ್ತಿ, ನರ್ಸ್ ಜ್ಯೋತಿ, ಹೆಲ್ತ್ ಇನ್ಸ್ಪೆಕ್ಟರ್ ಹಾಶಿಂ ಮಾತನಾಡಿದರು. ದಿಲೀಪ್ ಟಿ.ಎಸ್ ವಂದಿಸಿದರು. ಪಂ. ಸದಸ್ಯರು, ಆಶಾ ಕಾರ್ಯಕರ್ತೆಯರು, ಕುಟುಂಬಶ್ರೀ ಸದಸ್ಯೆಯರು, ಆರೋಗ್ಯ ಕಾರ್ಯ ಕರ್ತೆಯರು ಭಾಗ ವಹಿಸಿದರು.







