ಮಂಜೇಶ್ವರ: ಮಂಜೇಶ್ವರ ಪೊಲೀಸರು ಬಟ್ಯಪದವಿನ ಕೋಟೇಜ್ನಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ 182.120 ಗ್ರಾಂ ಎಂಡಿಎಂಎ ವಶಪಡಿಸಿಕೊಂ ಡಿದ್ದು, ಈಸಂಬಂಧ ಮೂವರನ್ನು ಬಂಧಿಸಲಾಗಿದೆ. ಉದ್ಯಾವರ ಬಟ್ಯಪದವು ಅಲ್ತಾಫ್ ಕೋಟೇಜ್ನಲ್ಲಿ ವಾಸಿಸುವ ಉದ್ಯಾವರ ಕುಂಡುಕೊಳಕೆ ಯಾಸಿನ್ ಮಂಜಿಲ್ ನಿವಾಸಿಯಾದ ಮುಹಮ್ಮದ್ ಶಿಹಾಬ್ (33), ದಕ್ಷಿಣಕನ್ನಡ ಗಂಜಿಮಠ ಎಂ. ಮಲಾಯಿ ಕ್ರಾಸ್ ರೋಡ್ ಮರ್ಹಬಾ ಹೌಸ್ನ ಮುಹಮ್ಮದ್ ಸಫ್ವಾನ್ (23), ಮೂಡಬಿದ್ರೆ ಕೈಕಂಬ ಗುರುಪುರ ಫಾತಿಮ ಅಪಾರ್ಟ್ಮೆಂಟ್ನ ಮುಹಮ್ಮದ್ ರಸಲ್ ಅಲಿ (21)ಎಂಬಿವರು ಸೆರೆಗೀಡಾದ ಆರೋಪಿಗಳಾಗಿದ್ದಾರೆ. ಮಂಜೇಶ್ವರ ಎಸ್ಐ ಜಿಯೋ ಸದಾನಂದನ್ ಎಸ್.ವಿ ಹಾಗೂ ತಂಡ ನಡೆಸಿದ ಕಾರ್ಯಾಚರಣೆಯಲ್ಲಿ ಈ ಮೂವರನ್ನು ಸೆರೆಹಿಡಿಯ ಲಾಗಿದೆ. ಆರೋಪಿಗಳ ಕೈಯಿಂದ ನಾಲ್ಕು ಮೊಬೈಲ್ ಫೋನ್ಗಳನ್ನು ವಶಪಡಿಸಲಾಗಿದೆ. ಗುಪ್ತ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ನಿನ್ನೆ ಸಂಜೆ 6.30ರ ವೇಳೆಗೆ ಅಲ್ತಾಫ್ ಕೋಟೇಜ್ಗೆ ಪೊಲೀಸರು ದಾಳಿ ನಡೆಸಿದ ತಪಾಸಣೆ ವೇಳೆ ಮಾದಕವಸ್ತು ಪತ್ತೆಯಾಗಿದೆ. ಸೆರೆಗೀಡಾದ ಆರೋಪಿಗಳನ್ನು ಪೊಲೀಸರು ಸಮಗ್ರ ತನಿಖೆಗೊಳಪಡಿಸುತ್ತಿದ್ದಾರೆ. ಮಂಜೇಶ್ವರ ಪೊಲೀಸ್ ಇನ್ಸ್ಪೆಕ್ಟರ್ ಎಂ.ವಿ. ವಿಷ್ಣುಪ್ರಸಾದ್ರ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ.






