ಕುಂಬಳೆ: ಮಂಜೇಶ್ವರ ಉಪಜಿಲ್ಲಾ ಶಾಲಾ ಕಲೋತ್ಸವ ಈ ತಿಂಗಳ 27ರಿಂದ 30ರ ವರೆಗೆ ಪೈವಳಿಕೆ ನಗರ ಜಿಎಚ್‌ಎಸ್‌ಎಸ್‌ನಲ್ಲಿ ನಡೆಯಲಿದೆ. ಈ ಬಗ್ಗೆ ಸ್ವಾಗತ ಸಮಿತಿ ಪದಾಧಿಕಾರಿ ಗಳು ಕುಂಬಳೆಯಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಉಪಜಿಲ್ಲೆಯ 113 ಶಾಲೆಗಳಿಂದ 5 ಸಾವಿರದಷ್ಟು ವಿದ್ಯಾರ್ಥಿಗಳು ವಿವಿಧ ಕಲಾ ಸ್ಪರ್ಧೆಗಳಲ್ಲಿ ಭಾಗವಹಿಸುವರು. ನಾಲ್ಕು ದಿನಗಳಲ್ಲಾಗಿ ೨೭ ವೇದಿಕೆ ಗಳಲ್ಲಿ ಕಲೋತ್ಸವ ನಡೆಯಲಿದೆ. ಶಾಲಾ ಕ್ಯಾಂಪಸ್, ಪಂಚಾಯತ್ ಕಚೇರಿ ಮೈದಾನ, ಪಯ್ಯಕ್ಕಿ ಉಸ್ತಾದ್ ಕಾಂಪೌಂಡ್ ಎಂಬೆಡೆಗಳಲ್ಲಾಗಿ ಪ್ರಧಾನ ವೇದಿಕೆಗಳು ಇರಲಿದೆ. 27ರಂದು ವೇದಿ ಕೇತರ ಸ್ಪರ್ಧೆಗಳು, 28, 29, 30ರಂದು ವೇದಿಕೆ ಸ್ಪರ್ಧೆಗಳು ನಡೆಯಲಿವೆ.
೨೮ರಂದು ಬೆಳಿಗ್ಗೆ 9.30ಕ್ಕೆ ಮಂಜೇಶ್ವರ ಎಇಒ ಜೋರ್ಜ್ ಕ್ರಾಸ್ತ ಧ್ವಜಾರೋಹಣಗೈಯ್ಯುವರು. 10 ಗಂಟೆಗೆ ಶಾಸಕ ಎಕೆಎಂ ಅಶ್ರಫ್ ಕಲೋತ್ಸವ ಉದ್ಘಾಟಿಸುವರು. ಪೈವಳಿಕೆ ಪಂ. ಅಧ್ಯಕ್ಷೆ ಜಯಂತಿ ಕೆ ಅಧ್ಯಕ್ಷತೆ ವಹಿಸುವರು. ಜಿಲ್ಲಾ ಪಂ. ಉಪಾಧ್ಯಕ್ಷ ಶಾನವಾಸ್ ಪಾದೂರು ಮುಖ್ಯ ಅತಿಥಿಯಾಗಿರುವರು. ಹಲವರು ಭಾಗವಹಿಸುವರು.
30ರಂದು ಸಂಜೆ 4 ಗಂಟೆಗೆ ಸಮಾರೋಪ ಸಮಾರಂಭವನ್ನು ಜಿಲ್ಲಾ ಪಂ. ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಉದ್ಘಾಟಿಸುವರು. ಮಂಜೇಶ್ವರ ಪಂಚಾಯತ್ ಅಧ್ಯಕ್ಷೆ ಶಮೀನಾ ಟೀಚರ್ ಅಧ್ಯಕ್ಷತೆ ವಹಿಸುವರು. ಡಿ.ಜಿ.ಇ ಸ್ಟೇಟ್ ಪ್ರೊಜೆಕ್ಟ್ ಆಫೀಸರ್ ಇಬ್ರಾಹಿಂ ಬಿ ಮುಖ್ಯ ಅತಿಥಿಯಾಗಿರುವರು. ವಿವಿಧ ಪಂಚಾಯತ್ ಅಧ್ಯಕ್ಷರು, ಜಿಲ್ಲಾ ಪಂಚಾಯತ್ ಸ್ಥಾಯೀ ಸಮಿತಿ ಅಧ್ಯಕ್ಷರು ಸಹಿತ ಹಲವರು ಮಾತನಾಡುವರು. ಈ ಬಗ್ಗೆ ನಡೆಸಿದ ಸುದ್ದಿಗೋಷ್ಠಿಯಲ್ಲಿ ಸ್ವಾಗತ ಸಮಿತಿ ಪ್ರಧಾನ ಸಂಚಾಲಕ ವಿಶ್ವನಾಥ, ಮುಖ್ಯೋಪಾಧ್ಯಾಯಿನಿ ಕುಮಾರಿ ವತ್ಸಲ, ಎಸ್‌ಎಂಸಿ ಅಧ್ಯಕ್ಷ ಅಸೀಸ್ ಕಳಾಯಿ, ಪ್ರಚಾರ ಸಮಿತಿ ಸಂಚಾಲಕ ಪ್ರವೀಣ್ ಭಾಗವಹಿಸಿದರು.