ಮಂಜೇಶ್ವರ ಉಪಜಿಲ್ಲಾ ವಿಜ್ಞಾನ ಮೇಳ ಉದ್ಘಾಟನೆ

ಮಂಜೇಶ್ವರ: ಮಂಜೇಶ್ವರ ಉಪಜಿಲ್ಲಾ ವಿಜ್ಞಾನ ಮೇಳ ಉದ್ಘಾಟನಾ ಸಮಾರಂಭ ಕೊಡ್ಲಮೊಗರು ಶ್ರೀ ವಾಣಿ ವಿಜಯ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಿನ್ನೆ ನಡೆಯಿತು. ಇಂದು ಸಮಾಪ್ತಿಗೊಳ್ಳಲಿದೆ.

ಶ್ರೀ ವಾಣಿ ವಿಜಯ ಹೈಯರ್ ಸೆಕೆಂಡರಿ ಶಾಲೆಯ ಪ್ರಾಂಶುಪಾಲ  ವಿಜಯ ಕುಮಾರ್ ಧ್ವಜಾರೋ ಹಣಗೈದರು. ಮಂಜೇಶ್ವರ ಉಪಜಿಲ್ಲಾ ಶಿಕ್ಷಣಾಧಿಕಾರಿ ಜಾರ್ಜ್ ಕ್ರಾಸ್ತಾ ಪ್ರಾಸ್ತಾವಿಕ ಮಾತುಗಳನ್ನಾಡಿದರು. ವರ್ಕಾಡಿ ಪಂಚಾಯತ್  ಅಧ್ಯಕ್ಷೆ ಭಾರತಿ ಎಸ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶಾಸಕ ಎಕೆಂ ಅಶ್ರಫ್ ಉದ್ಘಾಟಿಸಿ ಮಾತನಾಡಿದರು. ಜಿಲ್ಲಾ ಪಂಚಾಯತ್ ಸದಸ್ಯ ನಾರಾಯಣ ನಾಯ್ಕ್, ಕಮಲಾಕ್ಷಿ ಕೆ, ಮಲ್ಲಿಕಾ ಪ್ರಸಾದ್ ಚೌಟ, ವಿದ್ಯಾ ಬಾರಿಕೆ, ವರ್ಕಾಡಿ ಪಂಚಾಯತ್ ಆರೋಗ್ಯ ಮತ್ತು ಶಿಕ್ಷಣ ಸ್ಥಾಯೀ ಸಮಿತಿ ಅಧ್ಯಕ್ಷೆ ಮಮತಾ ಶೆಟ್ಟಿ, ವರ್ಕಾಡಿ ಪಂಚಾ ಯತ್ ಅಭಿವೃದ್ಧಿ ಸ್ಥಾಯೀ ಸಮಿತಿ ಅಧ್ಯಕ್ಷೆ ಗೀತಾ ವಿ. ಸಾಮಾನಿ, ವಾರ್ಡ ಪ್ರತಿನಿಧಿ ಆಶಾಲತಾ, ಪಿಟಿಎ ಅಧ್ಯಕ್ಷ ಅಬ್ದುಲ್   ಮಜೀದ್, ಮುಖ್ಯೋಪಾ ಧ್ಯಾಯ ವೇದಿಕೆಯ ಕಾರ್ಯದರ್ಶಿ ಶ್ಯಾಮ್ ಭಟ್, ಮೊಹಮ್ಮದ್ ರಫೀಕ್ ಶುಭ ಹಾರೈಸಿದರು. ಮುಖ್ಯೋಪಾಧ್ಯಾ ಯಿನಿ ಕೃಷ್ಣವೇಣಿ ಬಿ, ಶ್ರೀ ವಾಣಿ ವಿಜಯ ಎಯುಪಿ ಶಾಲೆಯ ಮುಖ್ಯೋಪಾಧ್ಯಾಯ ಸುಬ್ರಹ್ಮಣ್ಯ ಭಟ್, ಪಿಇಸಿ ಕಾರ್ಯದರ್ಶಿ ಪ್ರತಿಭಾ ಟೀಚರ್, ವಿವಿಧ ಕ್ಲಬ್‌ಗಳ ಕಾರ್ಯದರ್ಶಿಗಳು ಉಪಸ್ಥಿತರಿದ್ದರು. ಪ್ರಾಂಶುಪಾಲ ವಿಜಯ ಕುಮಾರ್ ಸ್ವಾಗತಿಸಿ, ಶಿಕ್ಷಕಿ ಆಶಾ ದಿಲೀಪ್ ರೈ ವಂದಿಸಿದರು. ರಾಜೇಶ್ ಆರ್ ಶೆಟ್ಟಿ,ಸಂಧ್ಯಾ ಟೀಚರ್ ನಿರೂಪಿಸಿದರು.

You cannot copy contents of this page