ಕೊನೆಗೂ ಮೋಕ್ಷ ಕಂಡ ಮಂಜೇಶ್ವರ ಕೆಜೆಎಂ ರಸ್ತೆ : ಮಂಜೇಶ್ವರ ಶಾಸಕರ ನಿಧಿಯಿಂದ ರಸ್ತೆ ಅಭಿವೃದ್ಧಿಗೆ ಚಾಲನೆ

ಮಂಜೇಶ್ವರ: ಕಳೆದ ಹಲವು ವರ್ಷಗಳಿಂದ ಹದಗೆಟ್ಟಿದ್ದ ಮಂಜೇಶ್ವರ ಕೆಜೆಎಂ ರಸ್ತೆಗೆ ಕೊನೆಗೂ ಹೊಸ ಜೀವ ದೊರಕಿದೆ. ಶಾಸಕ ಎಕೆಎಂ ಅಶ್ರಫ್‌ರ ಅಭಿವೃದ್ಧಿ ನಿಧಿಯಿಂದ 97 ಲಕ್ಷ ರೂಪಾಯಿ ಮಂಜೂರಾಗಿದ್ದು, ನಿನ್ನೆ ಈ ಮಹತ್ವದ ರಸ್ತೆ ಕಾಮಗಾರಿಗೆ ಅಧಿಕೃತ ಚಾಲನೆ ದೊರಕಿದೆ.

ಸುಮಾರು 1400 ಮೀಟರ್ ರಸ್ತೆಯಲ್ಲಿ 100 ಮೀಟರ್ ಕಾಂಕ್ರೀಟ್ ಹಾಗೂ 300 ಮೀಟರ್ ಡಾಮರೀಕರಣ ನಡೆಯಲಿದೆ. ಜೊತೆಗೆ ರಸ್ತೆಯಲ್ಲಿ ನೀರು ನಿಲ್ಲದಂತೆ ಮಾಡಲು 250 ಮೀಟರ್ ಉದ್ದದ ಚರಂಡಿ ನಿರ್ಮಿಸಲಾಗುತ್ತಿದೆ. ಈ ಕಾಮಗಾರಿ ಮುಕ್ತಾಯವಾದ ಬಳಿಕ ಮಂಜೇಶರ, ಕೆಜೆಎಂ ಮತ್ತು ಚೌಕಿ ಭಾಗದ ನಿವಾಸಿಗಳಿಗೆ ಸಂಚಾರಕ್ಕೆ ಪ್ರಯೋಜನ ಉಂಟಾಗಲಿದೆ.

You cannot copy contents of this page