ಮಂಜೇಶ್ವರ: ಪಂಚಾಯತ್‌ನಲ್ಲಿ ಯುಡಿಎಫ್ ಆಡಳಿತಕ್ಕೇರಿದೆ. ಅಧ್ಯಕ್ಷರಾಗಿ 12ನೇ ವಾರ್ಡ್ನ ಲೀಗ್ ಸದಸ್ಯ ಬಶೀರ್ ಕನಿಲ, ಉಪಾಧ್ಯಾಕ್ಷರಾಗಿ 8ನೇ ವಾರ್ಡ್ನ ಕಾಂಗ್ರೆಸ್ ಸದಸ್ಯೆ ಫಾತಿಮ್ಮತ್ ಜೌರ ಆಯ್ಕೆಯಾಗಿದ್ದಾರೆ. ಪಂಚಾಯತ್ ಒಟ್ಟು 24 ವಾರ್ಡ್ ಹೊಂದಿದೆ. 14 ಯುಡಿಎಫ್, 6 ಬಿಜೆಪಿ, 1 ಪಿಡಿಪಿ, 2 ಎಸ್.ಡಿ.ಪಿ.ಐ, 1 ಸ್ವತಂತ್ರ ಸದಸ್ಯರನ್ನು ಹೊಂದಿದೆ. ಬಿಜೆಪಿಯಿಂದ ಅಧ್ಯಕ್ಷರ ಸ್ಥಾನಕ್ಕೆ ಪ್ರಕಾಶ್ ಹಾಗೂ ಉಪಾಧ್ಯಾಕ್ಷರ ಸ್ಥಾನಕ್ಕೆ ಬೇಬಿಲತಾ ಸ್ಪರ್ಧಿಸಿದ್ದು, ಪಿಡಿಪಿ, ಎಸ್.ಡಿ.ಪಿ.ಐ ಸದಸ್ಯರು ತಟಸ್ಥಗೊಂಡಿದ್ದರು. ಪಂಚಾಯತ್ ವ್ಯಾಪ್ತಿಯಲ್ಲಿ, ಶುಚೀಕರಣ, ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ, ಬೀದಿ ದೀಪಗಳ ಸ್ಥಾಪನೆ, ಬಡಕುಟುಂಬಗಳಿಗೆ ಮನೆಯ ವ್ಯವಸ್ಥೆಗೆ ಮೊದಲ ಆದ್ಯತೆ ನೀಡುವುದಾಗಿಯೂ, ಇತರ ಸಮಸ್ಯೆಯನ್ನು ಪರಿಶೀಲಿಸಿ ಪರಿಹಾರಕ್ಕೆ ಕ್ರಮ ಕೈಗೊಳುವುದಾಗಿ ನೂತನ ಅಧ್ಯಕ್ಷ ಬಶೀರ್ ಕನಿಲ ತಿಳಿಸಿದ್ದಾರೆ.







