ಮಂಜೇಶ್ವರ :64 ನೇ ಮಂಜೇಶ್ವರ ಉಪಜಿಲ್ಲಾ ಮಟ್ಟದ ಶಾಲಾ ಕಲೋತ್ಸವ ಪೈವಳಿಕೆ ನಗರ ಶಾಲೆಯಲ್ಲಿ ಆರಂಭವಾಯಿತು.ಎಲ್ ಪಿ, ಯು ಪಿ,ಹೈಸ್ಕೂಲ್, ಹೈಯರ್ ಸೆಕೆಂಡರಿ ಶಾಲೆಗಳಲ್ಲಾಗಿ ಸುಮಾರು, 4500 ಕ್ಕಿಂತಲೂ ಅಧಿಕ ಮಕ್ಕಳು ಭಾಗವಹಿಸುತ್ತಿದ್ದಾರೆ. ಮಂಜೇಶ್ವರ ಶಾಸಕ ಎ ಕೆ ಎಂ ಅಶ್ರಫ್ ಉದ್ಘಾ ಟಿಸಿದರು. ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಶಾನವಾಸ್ ಪಾದೂರು ಮುಖ್ಯ ಅತಿಥಿಯಾಗಿದ್ದರು. ಪೈವಳಿಕೆ ಪಂಚಾಯತ್ ಅಧ್ಯಕ್ಷೆ ಜಯಂತಿ ಕೆ ಅಧ್ಯಕ್ಷತೆ ವಹಿಸಿದರು. ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿ ಜೋರ್ಜ್ ಕ್ರಾಸ್ತ ಧ್ವಜÁರೋಹಣಗೈದರು. ಜಿಲ್ಲಾ ಪಂಚಾಯತ್ ಸದಸ್ಯರಾದ ಕಮಲಾಕ್ಷಿ, ಗೋಲ್ಡನ್ ಅಬ್ದುಲ್ ಖಾದರ್, ನಾರಾಯಣ ನಾಯ್ಕ್ ಉಪಸ್ಥಿತರಿದ್ದರು. ಪೈವಳಿಕೆ ಪಂಚಾಯತ್ ಸದಸ್ಯರಾದ ಅಬ್ದುಲ್ ರಜÁಕ್ ಚಿಪ್ಪಾರು, ಸುನೀತಾ ವಲ್ಟಿ ಡಿಸೋಜ, ಸೀತಾರಾಮ ಶೆಟ್ಟಿ, ಅಶೋಕ್ ಭಂಡಾರಿ ಭಾಗವಹಿಸಿದರು. ಪೈವಳಿಕೆ ನಗರ ಶಾಲೆಯ ಪ್ರಾಂಶುಪಾಲ ರಘುರಾಮ ಆಳ್ವ, ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ, ಶ್ರೀನಿವಾಸ ಕೆ ,ಶ್ಯಾಮ್ ಭಟ್, ವತ್ಸಲಾ ಜಿ ಎಸ್ ಮಾತನಾಡಿದರು. ಕಲೋತ್ಸವ ಜನರಲ್ ಕನ್ವೀನರ್ ವಿಶ್ವ ನಾಥ ಕೆ ಸ್ವಾಗತಿಸಿ, ಸ್ವಾಗತ ಸೆÄತಿ ಕನ್ವೀನರ್ ಅನೀಶ್ ವಂದಿಸಿದರು.







