ಕುಂಬಳೆ: ವಾಹನ ಅಪಘಾತದಲ್ಲಿ ಪಕ್ಕೆಲುಬು ಮುರಿತಕ್ಕೊಳಗಾದ ವ್ಯಕ್ತಿಗೆ ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆ ತಜ್ಞರು ಅತೀ ಸಾಹಸಿಕ ರೀತಿಯ ಶಸ್ತ್ರ ಚಿಕಿತ್ಸೆ ನಡೆಸಿದ್ದಾರೆ. ಕರ್ನಾಟಕದ ಪುತ್ತೂರಿನಲ್ಲಿ ಎರಡು ದಿನಗಳ ಹಿಂದೆ ಸಂಭವಿಸಿದ ವಾಹನ ಅಪಘಾತದಲ್ಲಿ ಕುಂಬಳೆ ನಿವಾಸಿಯಾದ 57ರ ಹರೆಯದ ವ್ಯಕ್ತಿಯ ಪಕ್ಕೆಲುಬು ಮುರಿದಿತ್ತು. ಇದರಿಂದ ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಯಲ್ಲಿ ದಾಖಲಾದ ವ್ಯಕ್ತಿಗೆ ಅತೀ ಸಾಹಸಿಕ ಹಾಗೂ ಸಂಕೀರ್ಣ ರೀತಿಯ ಶಸ್ತ್ರಚಿಕಿತ್ಸೆ ನಡೆಸಿ ಪಕ್ಕೆಲುಬನ್ನು ಪೂರ್ವಸ್ಥಿತಿಗೆ ತಲುಪಿಸಲಾಯಿತು. ಮೂರು ದಿನಗಳೊಳಗೆ ಆಸ್ಪತ್ರೆಯಿಂದ ವ್ಯಕ್ತಿಯನ್ನು ಬಿಡುಗಡೆಗೊಳಿಸಬಹುದೆಂದು ತಿಳಿಸಲಾಗಿದೆ. ಜಿಲ್ಲಾ ಸಹಕಾರಿ ಆಸ್ಪತ್ರೆಯ ಆರ್ಥೋ ಸರ್ಜನ್‌ಗಳಾದ ಡಾ| ವಿಷ್ಣು ಬಾಬುರಾಜ್, ಡಾ| ಮುಫಾತಿರ್ ಮುಸ್ತಫ ಎಂಬಿವರು ವ್ಯಕ್ತಿಯ ಶಸ್ತ್ರಚಿಕಿತ್ಸೆ ನಡೆಸಿ ಪೂರ್ಣ ಗುಣಮುಖನಾಗುವಂತೆ ಮಾಡಿದ್ದಾರೆ. ಅನಸ್ತೇಶಿಯನ್ ಡಾ| ಶ್ಯಾಂರಾಜ್‌ರ ಸಹಕಾರ ಕೂಡಾ ಶಸ್ತ್ರಚಿಕಿತ್ಸೆಗೆ ಲಭಿಸಿದೆ.






