ಮಂಗಲ್ಪಾಡಿ: ದೀಪಾವಳಿ ಹಬ್ಬದ ಪ್ರಯುಕ್ತ ಪ್ರತಾಪನಗರ ಶ್ರೀ ಗೌರೀ ಗಣೇಶ ಮಂದಿರದಲ್ಲಿ ಸಾಮೂ ಹಿಕ ಗೋಪೂಜೆ ನಿನ್ನೆ ಸಂಜೆ ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಿತು. ಬೆಳಿಗ್ಗೆ ನಟೇಶ ಬಳ್ಳಕ್ಕು ರಾಯರವರ ಪೌರೋಹಿತ್ವದಲ್ಲಿ ಗಣಹೋಮದೊಂದಿಗೆ ಆರಂಭಗೊAಡು, ಸಂಜೆ ಭಜನೆ, ಗಣಪತಿ ಪೂಜೆ, ಭಾರತ ಮಾತೆಗೆ ಪುಷ್ಪಾರ್ಚನೆ, ಬಳಿಕ ಸಾಮೂಹಿಕ ಗೋಪೂಜೆ ಜರಗಿತು. ಉಪಹಾರದೊಂದಿಗೆ ಸಮಾಪ್ತಿಗೊಂ ಡಿತು. ಮಾತೆಯರ ಸಹಿತ ನೂರಾರು ಮಂದಿ ಭಕ್ತರು ಭಾಗವಹಿಸಿದ್ದರು.
